ಬೋನಿಗೆ ಬಿದ್ದ ಚಿರತೆಗಳು

Leopard capture
Published on

ಮೈಸೂರು: ಮೈಸೂರು ಪ್ರಾದೇಶಿಕ ಅರಣ್ಯ ವಲಯ ವ್ಯಾಪ್ತಿಯಲ್ಲಿ ಸೋಮವಾರ ಎರಡು ಚಿರತೆಗಳು ಬೋನಿಗೆ ಬಿದ್ದಿವೆ.

ತಿ.ನರಸೀಪುರ ತಾಲೂಕಿನ ತಲಕಾಡು ವ್ಯಾಪ್ತಿಯ ಕುರುಬಲಹುಂಡಿ ಗ್ರಾಮದಲ್ಲಿ ಇರಿಸಲಾಗಿದ್ದ ಬೋನಿಗೆ 4 ವರ್ಷದ ಗಂಡು ಚಿರತೆ ಹಾಗೂ ನಂಜನಗೂಡು ತಾಲೂಕಿನ ಚಿಕ್ಕಕಾನ್ಯ ಛತ್ರ ಹೋಬಳಿಯ ರಾಮಾಪುರ ಗ್ರಾಮದಲ್ಲಿ 5 ವರ್ಷದ ಗಂಡು ಚಿರತೆ ಸೆರೆಯಾಗಿದೆ.


ಸೆರೆಯಾದ 2 ಚಿರತೆಗಳು ಆರೋಗ್ಯವಾಗಿದ್ದು, ಮೈಕ್ರೋ ಚಿಪ್ ಅಳವಡಿಸಿ ಇವುಗಳನ್ನು ಕಾಡಿಗೆ ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ ಎಂದು ಡಿಸಿಎಫ್ ಡಾ.ಬಸವರಾಜ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net