

ವಿರಾಜಪೇಟೆ: ತೋಟದ ರಕ್ಷಣೆಗೆ ಹಾಕಿದ ತಂತಿಬೇಲಿಗೆ ಸಿಲುಕಿಕೊಂಡಿದ್ದ ಚಿರತೆ ರಕ್ಷಿಸಿ ಮಂಗಳವಾರ ನಾಗರಹೊಳೆ ಅಭಯಾರಣ್ಯಕ್ಕೆ ಬಿಡಲಾಗಿದೆ.
ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮದ ಮಾಳೇಟಿರ ಗೌತಮ್ ಅವರ ಕಾಫಿ ತೋಟದಲ್ಲಿ ಚಿರತೆಯೊಂದು ತೋಟದ ರಕ್ಷಣೆಗೆ ಹಾಕಿದ ತಂತಿಬೇಲಿಗೆ ಸಿಲುಕಿಕೊಂಡು ನರಲಾಡುತ್ತಿತ್ತು. ತೋಟದ ಮಾಲೀಕರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆಯ ಸಿಬ್ಬಂದಿ, ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಪರಿಶೀಲಿಸಿದರುಅರವಳಿಕೆ ಮದ್ದು ನೀಡಿ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಿ ಚಿರತೆ ಸೆರೆ ಹಿಡಿದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಚಿರತೆಯನ್ನು ನಾಗರಹೊಳೆ ಅಭಯಾರಣ್ಯಕ್ಕೆ ಸ್ಥಳಾಂತರಿಸಲಾಯಿತು. ಕಾರ್ಯಚರಣೆಯಲ್ಲಿ ಎಎಫ್‌ಒ ಗೋಪಾಲ್, ಆರ್‌ಎಫ್‌ಒ ಶಿವರಾಮ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ, ಪಶುವೈದ್ಯ ರಮೇಶ್, ಅರವಳಿಕೆ ತಜ್ಞ ರಂಜನ್ ಇದ್ದರು.