ಮನೆ ಆವರಣದೊಳಗಿದ್ದ ನಾಯಿಯನ್ನೇ ಹೊತ್ತೊಯ್ದ ಚಿರತೆ; ಹಾಡಹಗಲೇ ಕಾಡುಪ್ರಾಣಿಯ ಕಾಟ..

1276121
Published on

ಹಾಸನ: ಇತ್ತೀಚೆಗೆ ರಾಜ್ಯದ ಹಲವೆಡೆ ಚಿರತೆಗಳು ಊರೊಳಗೇ ಚಿರತೆಗಳು ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಇಂದು ಚಿರತೆಯೊಂದು ಮನೆ ಆವರಣದೊಳಗಿದ್ದ ನಾಯಿಯನ್ನೇ ಹೊತ್ತೊಯ್ದ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ದೇವೇಗೌಡ ಎಂಬವರ ಮನೆಯ ಆವರಣದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಕಾಂಪೌಂಡ್ ಮೇಲೆ ಕುಳಿತು ಹೊಂಚು ಹಾಕಿ ನಾಯಿಯನ್ನು ಹೊತ್ತೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇತ್ತೀಚೆಗೆ ಹಗಲಿನಲ್ಲೇ ಗ್ರಾಮದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಕುರಿ, ಮೇಕೆ, ನಾಯಿಗಳನ್ನು ಹೊತ್ತೊಯ್ಯುತ್ತಿವೆ ಎಂದು ಗ್ರಾಮಸ್ಥರ ಅಳಲು ತೋಡಿಕೊಂಡಿದ್ದಾರೆ. ಮಾತ್ರವಲ್ಲ, ಅರಣ್ಯ ಇಲಾಖೆಯವರು ಕೂಡಲೇ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net