ಮೂವರನ್ನು ಗಾಯಗೊಳಿಸಿದ್ದ ಚಿರತೆ ಸೆರೆ

Published on

 ಗುಬ್ಬಿ: ತಾಲೂಕಿನ ಸಿ.ಎಸ್​.ಪುರ ಬಳಿಯ ವಿ.ಕೋಡಿಹಳ್ಳಿಯಲ್ಲಿ ಮೂವರ ಮೇಲೆರಗಿ ಗಾಯಗೊಳಿಸಿದ್ದ ಚಿರತೆ ಬಲೆಗೆ ಬಿದ್ದಿದೆ. ಅರಣ್ಯ ಹಾಗೂ ಸಿ.ಎಸ್​.ಪುರ ಪೊಲೀಸ್​ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಗುರುವಾರ ಸುಮಾರು 8 ವರ್ಷದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಕ್ಕಕೆರೆ ಬಾರೆ ತೋಟದ ಸಾಲಿನಲ್ಲಿ ಕಾಣಿಸಿಕೊಂಡ ಚಿರತೆಯು ಸ್ಥಳಿಯ ರೈತರ ಮೇಲೆರಗಿ ಗಾಯಗೊಳಿಸಿತ್ತು. ಗ್ರಾಮದ ಬಳಿ ಬುಧವಾರ ಚಿರತೆ ಕಾಣಿಸಿಕೊಂಡಿದ್ದು, ಪ್ರಾಣಹಾನಿ ಮಾಡುವ ಭಯದಲ್ಲಿ ಗ್ರಾಮಸ್ಥರು ಕಲ್ಲುದೊಣ್ಣೆ ಹಿಡಿದು ಓಡಿಸಲು ಮುಂದಾಗಿದ್ದು, ಈ ವೇಳೆ ವ್ಯಗ್ರಗೊಂಡ ಚಿರತೆಯು ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಮೂವರು ಗಾಯಗೊಂಡಿದ್ದರು. ವಲಯ ಅರಣ್ಯಾಧಿಕಾರಿ ಸತೀಶ್​ ಚಂದ್ರ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net