ಕೆಆರ್‌ಎಸ್ ಬಳಿ ಚಿರತೆ ಪ್ರತ್ಯಕ್ಷ

09-09-24--krs1
ಕೆ.ಆರ್.ಸಾಗರದ ಬೃಂದಾವನ ಉದ್ಯಾನವನದಲ್ಲಿ ಉತ್ತರ ಭಾಗದಲ್ಲಿನ ಸರ್ಕಾರಿ ಹಣ್ಣಿನ ತೋಟದ ಬಳಿ ಚಿರತೆ ಹಿಡಿಯಲು ಬೋನ್ ಇಡಲಾಗಿದೆ.
Published on

ಕೆ.ಆರ್.ಸಾಗರ: ವಿಶ್ವ ವಿಖ್ಯಾತ ಬೃಂದಾವನದ ಉತ್ತರ ಭಾಗದಲ್ಲಿನ ಸರ್ಕಾರಿ ಹಣ್ಣಿನ ತೋಟದಲ್ಲಿ ಭಾನುವಾರ ರಾತ್ರಿ ಚಿರತೆ ಪ್ರತ್ಯೇಕ್ಷವಾಗಿ ಆತಂಕ ಸೃಷ್ಟಿಸಿದೆ.


ಅಣೆಕಟ್ಟೆ ಭದ್ರತೆ ನಿರ್ವಹಣೆ ಮಾಡುತ್ತಿರುವ ಕರ್ನಾಟಕ ಕೈಗಾರಿಕಾ ಭದ್ರತಾ ಸಿಬ್ಬಂದಿ ಭಾನುವಾರ ರಾತ್ರಿ ಸರ್ಕಾರಿ ಹಣ್ಣಿನ ತೋಟದ ಬಳಿ ಗಸ್ತಿನಲ್ಲಿದ್ದ ಸಂದರ್ಭದಲ್ಲಿ ನಾಯಿ ಕಿರುಚಾಟ ಕೇಳಿ ಸಿಬ್ಬಂದಿ ನೋಡಿದಾಗ ಚಿರತೆ ಕಂಡಿದೆ. ಟಾರ್ಚ್ ಬಿಟ್ಟ ಸಂದರ್ಭದಲ್ಲಿ ಓಡಿಹೋಗಿದೆ.
ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಪಾಂಡವಪುರ ತಾಲೂಕು ಅರಣ್ಯ ವಲಯದ ಆರ್‌ಎಫ್‌ಒ ಬಿ.ಆರ್.ಬಿ ಜಗದೀಶ್‌ಗೌಡ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಸಿಬ್ಬಂದಿ ಸಮೇತ ಸ್ಥಳ ಪರಿಶೀಲನೆ ನಡೆಸಿ, ಬೋನ್ ಇರಿಸಲಾಗಿದೆ.

ಕಳೆದ 2022ರಲ್ಲಿ ಚಿರತೆ ಕಂಡು ಬಂದು ಹಲವು ತಿಂಗಳ ನಂತರ ಡಿಸೆಂಬರ್‌ನಲ್ಲಿ ಕೂಡ ಚಿರತೆ ಬೋನ್‌ಗೆ ಬಿದ್ದಿತ್ತು, ಈಗ ಮತ್ತೆ ಚಿರತೆ ಕಂಡು ಬಂದಿದ್ದು, ಆತಂಕ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net