ಸಿದ್ದಾಪುರ ತಾಲೂಕಿನ ಮುಸೇಗಾರಿನಲ್ಲಿ ಚಿರತೆ ಪ್ರತ್ಯಕ್ಷ

CHIRATE
Published on

ಸಿದ್ದಾಪುರ: ಮನೆಯೊಳಗೆಯೇ ಬಂದೂಕಿನಿಂದ ಈಡು ಹಾರಿಸಿ ಚಿರತೆಯನ್ನು ಓಡಿಸಿದ ಘಟನೆ ಸಿದ್ದಾಪುರ ತಾಲೂಕಿನ ಮುಸೇಗಾರಿನ ಆರ್.ಎನ್. ಹೆಗಡೆ ಎಂಬುವರ ಮನೆಯಲ್ಲಿ ನಡೆದಿದೆ.
ನಾಯಿ ಬೇಟೆಗೆಂದು ಚಿರತೆ ಮನೆಯಂಗಳಕ್ಕೆ ಬಂದಿದೆ. ಚಿರತೆಯನ್ನು ಕಂಡ ನಾಯಿ ಬೊಗಳಲಾರಂಭಿಸಿದೆ. ಚಿರತೆಯನ್ನು ಓಡಿಸಲು ಮನೆಯ ಮಾಲೀಕ ಮನೆಯೊಳಗೆಯೇ ಪಟಾಕಿ ಹೊಡೆದರೂ ಪ್ರಯೋಜನವಾಗಿಲ್ಲ. ನಂತರ ಈಡು ಹಾರಿಸಿ ಓಡಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ಮೇ 22 ಹಾಗೂ ಆ.9ರಂದು ಮನೆಯಂಗಳಕ್ಕೆ ಬಂದು ನಾಯಿಯನ್ನು ಹೊತ್ತುಕೊಂಡು ಹೋಗಿತ್ತು. ಈ ಕುರಿತು ಸಂಬಂಧ ಪಟ್ಟ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದರೂ ಪ್ರಯೋಜನವಾಗಿಲ್ಲ.
ಚಿರತೆಯ ಹಾವಳಿಯಿಂದಾಗಿ ರಾತ್ರಿ ಮನೆಯ ಹೊರಗೆ ಬಾರದ ಪರಿಸ್ಥಿತಿ ಇದೆ. ಚಿರತೆ ಸೆರೆಗೆ ಬೋನು ಇಡಿ ಎಂದು ವಿನಂತಿಸಲಾಗಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮೂರ್ನಾಲ್ಕು ದಿನದಲ್ಲಿ ಬೋನಿನ ವ್ಯವಸ್ಥೆ ಮಾಡಲಾಗುವುದು ಎನ್ನುವ ಆಶ್ವಾಸನೆ ನೀಡಿದ್ದಾರೆ ಎಂದು ಆರ್.ಎನ್. ಹೆಗಡೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net