ಬೀರವಳ್ಳಿ, ಆಸ್ತಕಟ್ಟಿ ಬಳಿ ಚಿರತೆ ಪ್ರತ್ಯಕ್ಷ

KLG CHEETHA
ಕಲಘಟಗಿ ತಾಲೂಕಿನ ಆಸ್ತಕಟ್ಟಿ ಹಾಗೂ ಬೀರವಳ್ಳಿ ಗ್ರಾಮದ ರಸ್ತೆ ಬಳಿ ಚಿರತೆ ಕಾಣಿಸಿಕೊಂಡಿರುವುದು. ಕಲಘಟಗಿ ತಾಲೂಕಿನ ಆಸ್ತಕಟ್ಟಿ ಹಾಗೂ ಬೀರವಳ್ಳಿ ಗ್ರಾಮದ ಬಳಿ ಚಿರತೆಯೊಂದು ನಾಯಿಯನ್ನು ತಿಂದು ಹಾಕಿರುವುದು.
Published on

ಕಲಘಟಗಿ: ಕಳೆದ ಕೆಲವು ದಿನಗಳಿಂದ ತಾಲೂಕಿನ ಬೀರವಳ್ಳಿ ಆಸ್ತಕಟ್ಟಿ ಗ್ರಾಮದ ಸರಹದ್ದಿನಲ್ಲಿ ಕಾಣಿಸಿಕೊಂಡ ಚಿರತೆಯೊಂದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಬೆನ್ನಲ್ಲೆ ಗುರುವಾರ ರಾತ್ರಿ ನಾಯಿ ಮೆಲೆ ದಾಳಿ ಮಾಡಿ ಕೊಂದು ಹಾಕಿದೆ.

ಬೀರವಳ್ಳಿ ಗ್ರಾಮದ ಮಂಜುನಾಥ ಗೌರಿ ಎಂಬುವವರಿಗೆ ಸೇರಿದ 2 ವರ್ಷದ ಜರ್ಮನ್ ಶಫರ್ಡ್ ನಾಯಿಯನ್ನು ಕಲ್ಲಪ್ಪ ಇಂಗಳಗಿ ಎಂಬುವರ ಹೊಲದ ಮನೆಯಲ್ಲಿ ಕಟ್ಟಿದಾಗ ಗುರುವಾರ ರಾತ್ರಿ ಈ ಘಟನೆ ಜರುಗಿದೆ.

ತಬಕದ ಹೊನ್ನಳ್ಳಿ, ಆಸ್ತಕಟ್ಟಿ, ಬೀರವಳ್ಳಿ, ಬೆಂಡಲಗಟ್ಟಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಹಲವಾರು ದಿನಗಳಿಂದ ಚಿರತೆ ಓಡಾಡುತ್ತಿರುವುದು ಕಂಡುಬಂದಿದೆ. 2 ವಾರಗಳ ಹಿಂದಷ್ಟೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಚಿರತೆಯೊಂದು ಬಿದ್ದಿತ್ತು. ಈಗ ಮತ್ತೊಂದು ಚಿರತೆಯ ಉಪಟಳದಿಂದಾಗಿ ಸುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

‘ಚಿರತೆ ಕಾಣಿಸಿಕೊಂಡ ಸ್ಥಳಗಳಲ್ಲಿ ಬೋನು ಇರಿಸಿ ಚಿರತೆಯನ್ನು ಸೆರೆ ಹಿಡಿಯುತ್ತೇವೆ. ಅಲ್ಲಿಯವರೆಗೂ ರೈತರು ರಾತ್ರಿ ಸಮಯದಲ್ಲಿ ಹೊಲಗಳಿಗೆ ತೆರಳಬಾರದು’ ಎಂದು ವಲಯ ಅರಣ್ಯಾಧಿಕಾರಿ ಅರುಣಕುಮಾರ ಅಷ್ಟಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net