ಹನುಮನಪುರ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ

 ನಂಜನಗೂಡು ತಾಲೂಕಿನ ಹನುಮನಪುರ ನಿವಾಸಿ ಮಹದೇವಸ್ವಾಮಿ ಅವರು ಚಿರತೆ ಅಡ್ಡಾಡುವ ದೃಶ್ಯವನ್ನು ಮೊಬೈನ್‌ನಲ್ಲಿ ಸೆರೆ ಹಿಡಿದಿರುವುದು
ನಂಜನಗೂಡು ತಾಲೂಕಿನ ಹನುಮನಪುರ ನಿವಾಸಿ ಮಹದೇವಸ್ವಾಮಿ ಅವರು ಚಿರತೆ ಅಡ್ಡಾಡುವ ದೃಶ್ಯವನ್ನು ಮೊಬೈನ್‌ನಲ್ಲಿ ಸೆರೆ ಹಿಡಿದಿರುವುದು
Published on

ನಂಜನಗೂಡು: ತಾಲೂಕಿನ ಹನುಮನಪುರ ಗ್ರಾಮದಲ್ಲಿ ಒಂದು ವಾರದಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಗ್ರಾಮದ ಹೊರವಲಯದ ಗುಡ್ಡವೊಂದರಲ್ಲಿ ಚಿರತೆ ಮರಿ ಹಾಕಿರುವುದನ್ನು ಕೆಲವರು ಗಮನಿಸಿದ್ದಾರೆ. ಅಲ್ಲದೆ ಚಿರತೆ ಬಂಡೆ ಮೇಲೆ ಕುಳಿತಿರುವುದನ್ನೂ ನೋಡಿದ್ದಾರೆ. ಈ ನಡುವೆ ಗ್ರಾಮದ ನಿವಾಸಿ ಮಹದೇವಸ್ವಾಮಿ ಅವರು ರಾತ್ರಿ ವೇಳೆ ಜಮೀನಿಗೆ ತೆರಳುತ್ತಿದ್ದಾಗ ರಸ್ತೆಯಲ್ಲಿ ಅಡ್ಡಲಾದ ಚಿರತೆಯ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net