ಮೂಲ್ಕಿ ರುದ್ರಭೂಮಿ ಬಳಿ ಮತ್ತೆ ಚಿರತೆ ಪ್ರತ್ಯಕ್ಷ

Leapord
Published on

ಮೂಲ್ಕಿ: ಕಳೆದ ಕೆಲ ದಿನಗಳಿಂದ ಮೂಲ್ಕಿ ಮೆಡಲಿನ್ ಶಾಲೆ, ಹಿಂದು ರುದ್ರಭೂಮಿ, ಅಂಚೆ ಕಚೇರಿ, ಅಕ್ಕಸಾಲಿಗರ ಕೇರಿ ರಸ್ತೆಯ ಅಕ್ಕ ಪಕ್ಕ ಚಿರತೆ ಸಂಚರಿಸುತ್ತಿದ್ದು, ಸ್ಥಳೀಯರನ್ನು ಆತಂಕಕ್ಕೀಡು ವಾಡಿದೆ.

ಮಂಗಳವಾರ ಸಂಜೆ ಹಿಂದು ರುದ್ರಭೂಮಿ ಬಳಿ ಚಿರತೆ ಓಡಾಡುವ ದೃಶ್ಯ ಸ್ಥಳೀಯ ಸಿ.ಸಿ. ಕ್ಯಾಮರಾದಲ್ಲಿ ಪತ್ತೆಯಾಗಿದೆ.  ಕಳೆದ ಮೂರು ದಿನದ ಹಿಂದೆ ಅಕ್ಕಸಾಲಿಗರ ಕೇರಿ ರಸ್ತೆ ಬಳಿಯ ನಾಗರಾಜ ಆಚಾರ್ಯ ಎಂಬುವರ ತೋಟದಲ್ಲಿ ಚಿರತೆ ಪತ್ತೆಯಾಗಿತ್ತು. ಮೂಲ್ಕಿ ಮನೆಯೊಂದರ ಅಡುಗೆ ಮನೆ ಸೇರಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದು, ಅದರ ಜೋಡಿ ಇರಬಹುದು ಎಂಬುದಾಗಿ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಕೂಡಲೇ ಕಾರ್ಯಾಚರಣೆ ನಡೆಸಿ ಚಿರತೆಗಳನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net