ಮುಳ್ಳೇರಿಯ ಆಸುಪಾಸು ಚಿರತೆ ಸಂಚಾರ

leopard
Published on

ಕಾಸರಗೋಡು: ಮುಳ್ಳೇರಿಯ ಸನಿಹದ ಪೂವಡ್ಕದಲ್ಲಿ ಚಿರತೆ ಪತ್ತೆಯಾಗಿದೆ. ಚೆರ್ಕಳ-ಜಾಲ್ಸೂರ್ ರಾಜ್ಯ ಹೆದ್ದಾರಿಯ ಮುಳ್ಳೇರಿಯ ಸನಿಹದ ಪೂವಡ್ಕ ಪ್ರದೇಶದಲ್ಲಿ ಕಾರಡ್ಕ ಜಿವಿಎಚ್‌ಎಸ್‌ಎಸ್ ರಕ್ಷಕ ಶಿಕ್ಷಕ ಸಂಘದ ಅದ್ಯಕ್ಷ ಕೆ. ಸುರೇಶ್ ಸಂಚರಿಸುತ್ತಿದ್ದ ಕಾರಿಗೆ ಅಡ್ಡ ಚಿರತೆ ಸಂಚರಿಸಿದ್ದು, ಪೂವಡ್ಕದ ಟವರ್ ನಿರ್ಮಾಣ ಪ್ರದೇಶದ ಮೂಲಕ ನಟರಾಜ್ ಎಂಬವರ ತೋಟದತ್ತ ಸಾಗಿರುವುದನ್ನು ಕಂಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ನೀಡಿದ ಮಾಹಿತಿಯನ್ವಯ ಅಧಿಕಾರಿಗಳು ಸಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದರು. ಕೊಟ್ಟಂಗುಳಿ ಅರಣ್ಯ ಪ್ರದೇಶದಲ್ಲಿ ಚಿರತೆ ಬೀಡುಬಿಟ್ಟಿರುವ ಬಗ್ಗೆ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net