ಚಿರತೆ ದಾಳಿಗೆ ಟಗರು ಬಲಿ: ಹತ್ತು ಅಡಿ ಎತ್ತರದ ಕಾಂಪೌಂಡ್ ಹಾರಿ ಬಂದ ವ್ಯಾಘ್ರ

Leopard killed sheep mandya
Published on

ಮಂಡ್ಯ: ತಾಲೂಕಿನ ದುದ್ದ ಹೋಬಳಿಯ ಹುಳ್ಳೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಚಿರತೆ ದಾಳಿ ನಡೆಸಿ ಸಾವಿರಾರೂ ರೂ ಮೌಲ್ಯದ ಎರಡು ಟಗರನ್ನು ಕೊಂದು ಹಾಕಿದೆ.

ಹುಳ್ಳೇನಹಳ್ಳಿ ಗ್ರಾಮದ ಶಿವಶಂಕರ್ ತಮಗೆ ಸೇರಿದ ಟಗರುಗಳನ್ನು ಕನ್ನಹಟ್ಟಿಗೆ ತೆರಳುವ ಮಾರ್ಗದಲ್ಲಿರುವ ಗೋಡೌನ್‌ನಲ್ಲಿ ಕಟ್ಟಿ ಹಾಕಿದ್ದರು. ಸುಮಾರು 10 ಅಡಿ ಎತ್ತರದ ಕಾಂಪೌಂಡ್ ಅನ್ನು ಹಾರಿ ಒಳಗೆ ಬಂದಿರುವ ಚಿರತೆ, ಟಗರುಗಳನ್ನು ಕೊಂದು ಹೊತ್ತುಕೊಂಡು ಹೋಗಿದೆ. ಈ ವೇಳೆ ಕೆಲ ಮಾಂಸದ ತುಂಡುಗಳು ಬಿದ್ದಿವೆ. ಶನಿವಾರ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಚಿರತೆ ದಾಳಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net