ಬೋನಿಗೆ ಬಿದ್ದ ಚಿರತೆ

IMG-20250909-WA0003
ಎಚ್.ಡಿ.ಕೋಟೆ ಪಟ್ಟಣದ ಜಮೀನೊಂದರಲ್ಲಿ ಅರಣ್ಯ ಇಲಾಖೆ ಇಟ್ಟಿದ ಬೋನ್ ಗೆ ಚಿರತೆ ಸೆರೆಯಾಗಿರುವುದು.
Published on

ಎಚ್.ಡಿ.ಕೋಟೆ: ಬೋನಿನಲ್ಲಿ ಕರು ಇದ್ದರೂ, ಅದನ್ನು ತಿನ್ನದೇ ಚಿರತೆ ತಾಯಿಯಂತೆ ಮಮಕಾರ ತೋರಿದೆ.

ಪಟ್ಟಣದ ಹೆತ್ತನಾಯ್ಕರ ಜಮೀನಿನಲ್ಲಿ ಇರಿಸಿದ್ದ ಬೋನಿನಲ್ಲಿ ಸೋಮವಾರ ರಾತ್ರಿ ಆಹಾರ ಅರಸಿ ಬಂದ ಎರಡು ವರ್ಷದ ಗಂಡು ಚಿರತೆ ಬೋನಿನಲ್ಲಿ ಬಂಧಿಯಾಗಿದೆ. ಕಳೆದ 15 ದಿನಗಳ ಹಿಂದೆ ಇವರ ಜಮೀನಿನಲ್ಲಿ ಹಸು ಮೇಲೆ ದಾಳಿ ಮಾಡಿತ್ತು. ಚಿರತೆ ಸೆರೆ ಹಿಡಿಯುವಂತೆ ರೈತರು ಒತ್ತಾಯಿಸಿದ್ದರಿಂದ ಆ.22ರಂದು ಜಮೀನಿನಲ್ಲಿ ಎಚ್.ಡಿ.ಕೋಟೆ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಬೋನ್ ಇರಿಸಿದ್ದರು.

ಸಾಕು ಪ್ರಾಣಿಗಳ ಮೇಲೆ ಉಪಟಳ ನೀಡುತ್ತಿದ್ದ ಚಿರತೆ ಬೋನಿನಲ್ಲಿ ಇರಿಸಿದ್ದ ಕರು ಭಕ್ಷಿಸಲು ಬಂದು ಚಿರತೆ ಸೆರೆಯಾಗಿದೆ. ಒಂದೇ ಬೋನಿನಲ್ಲಿ ಯಾವುದೇ ಅಡೆತಡೆ ಇಲ್ಲದಂತಿದ್ದರೂ ಕರುವಿಗೆ ಯಾವುದೇ ಅಪಾಯ ಮಾಡದೆ ಚಿರತೆ, ತಾಯಿ ಮಮಕಾರ ತೋರಿಸಿದೆ.

ಸ್ಥಳಕ್ಕಾಗಮಿಸಿದ ಎಚ್.ಡಿ.ಕೋಟೆ ಸಹಾಯಕ ವಲಯ ಅರಣ್ಯ ಅಧಿಕಾರಿ ಪರಮೇಶ್, ಚಿರತೆ ಕಾರ್ಯಪಡೆಯ ಅಂಕಪ್ಪ ಹಾಗೂ ಸಿಬ್ಬಂದಿ ಸೆರೆ ಸಿಕ್ಕ ಚಿರತೆಯನ್ನು ಮತ್ತೊಂದು ಬೋನಿಗೆ ಸ್ಥಳಾಂತರಿಸಿ ಮೈಸೂರಿನ ಕೂರ್ಗಹಳ್ಳಿಗೆ ಕೊಂಡೊಯ್ದಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಚಿರತೆ ಆರೋಗ್ಯ ಆಧರಿಸಿ ಅರಣ್ಯಕ್ಕೆ ಬಿಡುವ ಚಿಂತನೆ ಮಾಡಲಾಗಿದೆ ಎಂದು ಎಚ್.ಡಿ.ಕೋಟೆ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net