ಕನ್ನಲಿಯಲ್ಲಿ ಕಾಣಿಸಿಕೊಂಡ ಚಿರತೆ ಮರಿ: ಸೆಲ್ಫಿ ಕ್ಲಿಕ್ಕಿಸಿಕೊಂಡು ಯುವಕರು

Leopard in sugarcane field mandya
Published on

ಮಂಡ್ಯ: ತಾಲೂಕಿನ ಕನ್ನಲಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಶನಿವಾರ ಮೂರು ಚಿರತೆ ಮರಿ ಕಾಣಿಸಿಕೊಂಡಿವೆ.

ಗ್ರಾಮದ ಶ್ರೀನಿವಾಸ್ ಎಂಬುವವರ ಜಮೀನಿನಲ್ಲಿದ್ದ ಮೂರು ಚಿರತೆ ಮರಿ ಪತ್ತೆಯಾಗಿವೆ. ಈ ಪೈಕಿ ಒಂದು ಮರಿಯನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದು, ಉಳಿದೆರೆಡನ್ನು ಚಿರತೆ ಎತ್ತುಕೊಂಡು ಹೋಗಿದೆ. ಬೋರಾಪುರ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಇರುವ ಜಮೀನಿನ ಕಬ್ಬಿನ ಗದ್ದೆಯಲ್ಲಿ ಕಟಾವು ಮಾಡುತ್ತಿರುವ ವೇಳೆ ಮರಿಗಳು ಸಿಕ್ಕಿವೆ. ಗ್ರಾಮದ ಕೆಲ ಯುವಕರು ಚಿರತೆ ಮರಿ ಜತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಮರಿಯನ್ನು ವಶಕ್ಕೆ ಪಡೆದಿದ್ದು, ಚಿರತೆ ಸೆರೆಗೆ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net