ಪುಟ್ಟನಮನೆ ಬೆಟ್ಟದಲ್ಲಿ ಮೃತ ಸ್ಥಿತಿಯಲ್ಲಿ ಚಿರತೆ ಪತ್ತೆ

sirsi lapord
Published on

ಶಿರಸಿ: ತಾಲೂಕಿನ ಪುಟ್ಟನಮನೆ ಬೆಟ್ಟದಲ್ಲಿ ಚಿರತೆಯೊಂದು ಮೃತ ಸ್ಥಿತಿಯಲ್ಲಿ ಸೋಮವಾರ ರಾತ್ರಿ ಪತ್ತೆಯಾಗಿದೆ.

ಇಲ್ಲಿಯ ಸರ್ವೆ ನಂ. 105ರಲ್ಲಿ ಈ ಚಿರತೆ ಬಿದ್ದಿರುವುದನ್ನು ಕಂಡು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸುಮಾರು ಎರಡು ವರ್ಷ ಪ್ರಾಯದ್ದಾಗಿರುವ ಈ ಹೆಣ್ಣು ಚಿರತೆಯನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅನಾರೋಗ್ಯದಿಂದ ಮೃತಪಟ್ಟಿರುವುದು ಪತ್ತೆಯಾಗಿದೆ. ಡಿಎಫ್​ಒ ಡಾ. ಅಜ್ಜಯ್ಯ ಜೆ.ಆರ್., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪವಿತ್ರಾ, ವಲಯಾರಣ್ಯಾಧಿಕಾರಿ ಗಿರೀಶ ನೇತೃತ್ವದಲ್ಲಿ ಚಿರತೆಯ ವಿಲೇವಾರಿ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net