ಕೊಡ್ಲಿಪೇಟೆ ಹೋಬಳಿಯಲ್ಲಿ ಚಿರತೆ ಆತಂಕ

15ss1chiratege bonu
Published on


ಕೊಡಗು : ಶನಿವಾರಸಂತೆಯ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.


ಶಿವರಳ್ಳಿ, ಬೆಂಬಳೂರು, ಲಕನಿ, ಅವರೆದಾಳು, ನಾಕಲಗೋಡು ಗ್ರಾಮಗಳಲ್ಲಿ ಹಲವು ದಿನಗಳಿಂದ ಚಿರತೆ ಕಾಣಿಸಿಕೊಂಡಿರುವುದಾಗಿ ಗ್ರಾಮಸ್ಥರು ಹೇಳುತ್ತಾರೆ. ಇದರ ಬೆನ್ನಲ್ಲೇ ಮನೆಯಲ್ಲಿದ್ದ ಸಾಕು ನಾಯಿಗಳು ಕೂಡ ಇದ್ದಕ್ಕಿದ್ದ ಹಾಗೆ ಕಾಣೆಯಾಗುತ್ತಿವೆ. ರೈತರು, ಕಾರ್ಮಿಕರು ತೋಟಗಳಿಗೆ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.


ಶಿವರಳ್ಳಿ ಗ್ರಾಮದ ಆನಂದ, ಕೊಮಾರಪ್ಪ, ಕುಮಾರಸ್ವಾಮಿ ಮತ್ತು ಹಾಲಪ್ಪ ಅವರ ಸಾಕು ನಾಯಿಗಳು ಕೆಲ ದಿನಗಳಿಂದ ಕಾಣೆಯಾಗಿವೆ. ಅರಣ್ಯ ಇಲಾಖೆಯಿಂದ ಲಕನಿ ಗ್ರಾಮದ ಕಾಫಿ ತೋಟದಲ್ಲಿ ಚಿರತೆ ಸೆರೆಗೆ ಬೋನು ಇರಿಸಲಾಗಿದ್ದು, ಸಿಬ್ಬಂದಿ ಚಿರತೆ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net