

ಗಂಗಾವತಿ: ಜಯನಗರ ಸಮೀಪದ ಬೆಟ್ಟದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಭಯ ಆವರಿಸಿದೆ.ಸಿದ್ದಿಕೇರಿ ಕ್ಯಾಂಪ್‌ಗೆ ಹೋಗುವ ದಾರಿಯಲ್ಲಿ ಬರುವ ಬೆಟ್ಟದ ಮೇಲೆ ಶುಕ್ರವಾರ ಬೆಳಗಿನ ಸಮಯದಲ್ಲಿ ಎರಡು ಚಿರತೆಗಳು ಕುಳಿತಿದ್ದು, ಬಹಳ ಹೊತ್ತಿನವರಿಗೂ ಕಲ್ಲು ಬಿಟ್ಟು ಕದಲಿಲ್ಲ. ವಾಯುವಿಹಾರಕ್ಕೆ ತೆರಳಿದವರೂ ಮೊಬೈಲ್‌ನಲ್ಲಿ ಚಿರತೆ ಚಲವಲನ, ಜಿಗಿಯುವ ದೃಶ್ಯ ಸೆರೆಯಾಗಿದೆ.. ಸಿದ್ದಿಕೇರಿ ಕ್ಯಾಂಪ್ ಆಸುಪಾಸಿನ ಬೆಟ್ಟದಲ್ಲಿ ಚಿರತೆಗಳಿದ್ದು, ರಾತ್ರಿ ಹೊತ್ತು ಕೆಳ ಪ್ರದೇಶದಲ್ಲಿ ಓಡಾಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ವಿಡಿಯೋ ಚಿತ್ರೀಕರಿಸಿದ ಚಾರಣ ಬಳಗದ ಮಂಜುನಾಥ ಗುಡ್ಲಾನೂರ್ ಮಾತನಾಡಿ, ಸೈಕ್ಲಿಂಗ್‌ಗಾಗಿ ಬೆಟ್ಟದ ಬಳಿ ತೆರಳಿದಾಗ ಚಿರತೆ ಕಾಣಿಸಿಕೊಂಡಿದ್ದು, ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ, ಅರಣ್ಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.ಸಿದ್ದಿಕೇರಿ ಬಳಿ 3 ವರ್ಷದ ಹಿಂದೆ ಒಂದು ಚಿರತೆಯನ್ನು ಬೋನು ಅಳವಡಿಸಿ ಸೆರೆಹಿಡಿದಿದ್ದು, ಇನ್ನೊಂದು ತಪ್ಪಿಸಿಕೊಂಡಿತ್ತು. ಎರಡು ಚಿರತೆಗಳು ಕಾಣಿಸಿಕೊಂಡಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.