

ಕೊಪ್ಪಳ: ಗಂಗಾವತಿ ತಾಲೂಕು ಹೇಮಗುಡ್ಡ ಗ್ರಾಮದ ಸಮೀಪದ ನಾಯಿ ಹೊತ್ತೊಯ್ಯುತ್ತಿದ್ದ ಚಿರತೆ ಲಾರಿ ಡಿಕ್ಕಿಯಾಗಿ ಮೃತಪಟ್ಟಿದೆ.
ಇಂದು ನಸುಕಿನ ವೇಳೆ ನಾಯಿ ಬೇಟೆಯಾಡಿರುವ ಚಿರತೆ ಅದನ್ನು ಹೊತ್ತು ರಸ್ತೆ ದಾಟುವಾಗ ಅಪಘಾತ ನಡೆದಿದೆ. ರಸ್ತೆ ಪಕ್ಕದಲ್ಲಿ ಚಿರತೆ ಒದ್ದಾಡಿ ಮೃತಪಟ್ಟಿದೆ. ಬೆಳಗಿನ ಜಾವ ರಸ್ತೆ ಪಕ್ಕದಲ್ಲಿ ಸತ್ತು ಬಿದ್ದ ಚಿರತೆಯನ್ನು ಕಂಡು ಬೆಚ್ಚಿ ಬಿದ್ದ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಭೇಟಿ ನೀಡಿದಾಗ ಅಪಘಾತದಿಂದ ಚಿರತೆ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ. ಹೇಮಗುಡ್ಡದ ಗುಡ್ಡ ಗಾಡು ಪ್ರದೇಶದಲ್ಲಿ ಚಿರತೆಗಳು ಹೆಚ್ಚು ವಾಸವಾಗಿದ್ದು ಗ್ರಾಮದಲ್ಲಿ ಈಗ ಭಯದ ವಾತಾವರಣ ನಿರ್ಮಾಣವಾಗಿದೆ. (ದಿಗ್ವಿಜಯ ನ್ಯೂಸ್)