ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆ ಸಾವು

Published on

ಕಾನಹೊಸಹಳ್ಳಿ (ವಿಜಯನಗರ): ಅಮಲಾಪುರ ಸಮೀಪ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬುಧವಾರ ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆ ಸ್ಥಳದಲ್ಲೇ ಸತ್ತಿದೆ. ಚಿರತೆಗೆ ಅಂದಾಜು ಒಂದರಿಂದ ಎರಡು ವರ್ಷ ವಯಸ್ಸಿರಬಹುದು ಎಂದು ಕೂಡ್ಲಿಗಿ ವಲಯ ಅರಣ್ಯಾಧಿಕಾರಿ ಸಂದೀಪನಾಯಕ ತಿಳಿಸಿದ್ದಾರೆ.

ಜರ್ಮಲಿ ಕಾಯ್ದಿಟ್ಟ ಅರಣ್ಯದ ಕಡೆ ಹೋಗಲು ಬಣವಿಕಲ್ಲು ಹಾಗೂ ಅಮಲಾಪುರ ಗ್ರಾಮಗಳ ಮಧ್ಯೆ ಇರುವ 101 ಪತ್ರೆ ವನ ಸಮೀಪ ರಾಷ್ಟ್ರೀಯ ಹೆದ್ದಾರಿ ದಾಟುವಾಗ ಚಿರತೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.

ಚಿಕ್ಕಜೋಗಿಹಳ್ಳಿ ಪಶು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅರಣ್ಯ ಸಿಬ್ಬಂದಿ ಚಿರತೆಯನ್ನು ಹೂತು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net