ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷ

Leopard
Published on

ಮುಂಡಗೋಡ: ತಾಲೂಕಿನ ಹುಲಿಹೊಂಡ ಗ್ರಾಮದ ಸನಿಹದ ಕಬ್ಬಿನ ಗದ್ದೆಯಲ್ಲಿ ಮರಿಗಳನ್ನು ಹಾಕಿದ್ದ ಚಿರತೆಯೊಂದು ಕಬ್ಬು ಕಟಾವು ಮಾಡಲು ಹೋದ ಕಾರ್ಮಿಕರ ಮೇಲೆ ದಾಳಿ ಮಾಡಲು ಯತ್ನಿಸಿದ ಘಟನೆ ಇತ್ತೀಚೆಗೆ ನಡೆದಿದೆ.

ರೈತ ಶಿವಾನಂದ ಕೆಂಗಾಪುರ ಎಂಬುವರ ಗದ್ದೆಯಲ್ಲಿ ಜ.12ರಂದು ಕಾರ್ಮಿಕರು ಕಬ್ಬು ಕಟಾವ ಮಾಡುತ್ತಿರುವಾಗ ಎರಡು ಚಿರತೆ ಮರಿಗಳು ಕಾಣಿಸಿಕೊಂಡಿವೆ. ತಕ್ಷಣ ಅವುಗಳನ್ನು ಅನತಿ ದೂರದಲ್ಲಿಟ್ಟು ಕಬ್ಬು ಕಟಾವ ಮಾಡಿ ಲಾರಿಗೆ ಕಬ್ಬು ತುಂಬುತ್ತಿದ್ದಾಗ ತಾಯಿ ಚಿರತೆ ಬಂದು ಕಾರ್ಮಿಕರ ಮೇಲೆ ದಾಳಿ ಮಾಡಲು ಯತ್ನಿಸಿದೆ. ಈ ವೇಳೆ ಕಾರ್ಮಿಕರು ಚಿರಾಡುತ್ತ ಪಕ್ಕದಲ್ಲಿದ್ದ ಲಾರಿ ಹತ್ತಿ ಕುಳಿತು ಕೂಗಾಟ ಮಾಡಿದಾಗ ಚಿರತೆ ಓಡಿ ಹೋಗಿದೆ.

ಕಾರ್ಮಿಕರು ಒಂದೆರಡು ದಿನಗಳ ನಂತರ ಪುನಃ ಕಬ್ಬು ಕಟಾವ ಮಾಡಲು ಹೋದಾಗ ಚಿರತೆಯ ಮರಿಗಳು ಅಲ್ಲಿಯೇ ಇರುವುದು ಕಂಡು ಕಬ್ಬು ಕಟಾವ ಮಾಡದೆ ಹಾಗೆ ಬಿಟ್ಟಿದ್ದಾರೆ. ಮಂಗಳವಾರ ರಾತ್ರಿಯೂ ಚಿರತೆ ಗದ್ದೆಯ ಸನಿಹದಲ್ಲಿ ಕಂಡು ಬಂದಿದ್ದು, ನಂತರ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ನಂತರ ಎಸಿಎಫ್ ರವಿ ಹುಲಕೋಟಿ ಹುಲಿಹೊಂಡ ಗ್ರಾಮಕ್ಕೆ ಭೇಟಿ ನೀಡಿ ಮರಿ ಚಿರತೆಗಳನ್ನು ತಾಯಿ ಕರೆದುಕೊಂಡು ಹೋಗಿದೆ ಎಂದು ತಿಳಿದಿದ್ದೆ. ಆದರೆ, ಮರಿಗಳು ಅಲ್ಲೆ ಇವೆ. ಮರಿಗಳ ಜತೆಗೆ ಚಿರತೆ ರಕ್ಷಣೆ ಮಾಡಲು ಅರಣ್ಯ ಸಿಬ್ಬಂದಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುವುದು. ರೈತರ ಕಬ್ಬು ಕಟಾವ ಮಾಡಲು ಮೊದಲ ಆದ್ಯತೆ ನೀಡಲಾಗುವುದು. ಹಲಗೆ ಬಾರಿಸುವುದು, ಪಟಾಕಿ ಹೊಡೆಯಲಾಗುವುದು. ಅಗತ್ಯ ಬಿದ್ದರೆ ಬೋನ್ ಇಟ್ಟು ಚಿರತೆ ಸೆರೆ ಹಿಡಿಯಲಾಗುವುದು. ಚಿರತೆ ಕಾಣಿಸಿಕೊಂಡ ಗದ್ದೆಗೆ ಮಹಿಳೆಯರು ಮತ್ತು ಮಕ್ಕಳು ಕೆಲಸಕ್ಕೆ ಹೋಗಬಾರದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net