ಬೋನಿಗೆ ಬಿದ್ದ ಚಿರತೆ ಮರಿ

Leopard cub caught in a trap
Published on

ಗುತ್ತಲ: ಅನೇಕ ದಿನಗಳಿಂದ ಪದೇಪದೆ ಕಾಣಿಸಿಕೊಳ್ಳುತ್ತಿದ್ದ ಚಿರತೆ ಭಾನುವಾರ ತಡರಾತ್ರಿ ಬೋನಿಗೆ ಬಿದ್ದಿದೆ. ಸಮೀಪದ ಕೂರಗುಂದ ರಸ್ತೆಯ ಮೀಸಲು ಅರಣ್ಯ ಪ್ರದೇಶದ ಬಳಿ ಇರುವ ಗೋಶಾಲೆ ಸುತ್ತಮುತ್ತ ಚಿರತೆ ಓಡಾಡಿದ ಬಗ್ಗೆ ಹೆಜ್ಜೆ ಗುರುತು ಕಂಡುಬಂದಿದ್ದವು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಚಿರತೆ ಸೆರೆಗೆ ಬೋನು ಇಟ್ಟಿದ್ದರು. ಸೋಮವಾರ ತಡರಾತ್ರಿ ದೊಡ್ಡ ಚಿರತೆ ಬದಲಾಗಿ ಮರಿ ಚಿರತೆ (ಸುಮಾರು 2 ವರ್ಷ) ಬೋನಿಗೆ ಬಿದ್ದಿದೆ.

ಬೋನಿಗೆ ಬಿದ್ದ ಚಿರತೆಯನ್ನು ಪ್ರಸ್ತುತ ಕರ್ಜಗಿ ಬಳಿ ಇರುವ ಅರಣ್ಯ ಇಲಾಖೆ ನರ್ಸರಿ ಬಳಿ ಇಡಲಾಗಿದೆ. ದಾಂಡೇಲಿ ಅಥವಾ ತಾವರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಬಿಡಲಾಗುತ್ತದೆ.

ಕೆಲ ತಿಂಗಳ ಹಿಂದೆ ಗೋಶಾಲೆಯಲ್ಲಿ ಕಟ್ಟಿದ್ದ ಆಕಳ ಕರು ತಿಂದು ಹೋಗಿದ್ದ ಚಿರತೆ ಹಾಗೂ ಅದರ 2 ಮರಿಗಳಲ್ಲಿ ಒಂದು ಮರಿ ಸೋಮವಾರ ಬೋನಿಗೆ ಬಿದ್ದಿದೆ ಎನ್ನಲಾಗಿದೆ. ಇನ್ನೂ ಒಂದು ಚಿರತೆ ಹಾಗೂ ಸಣ್ಣ ಮರಿ ಕೂರಗುಂದ, ಭರಡಿ, ಗುತ್ತಲದ ದೊಡ್ಡ ಕೆರೆ, ಮೀಸಲು ಅರಣ್ಯ ಪ್ರದೇಶ ಹಾಗೂ ರಾಜೀವನಗರದ ಸುತ್ತಮುತ್ತ ಕಾಣಿಸಿಕೊಳ್ಳುತ್ತಲೇ ಇದ್ದು, ಅವುಗಳನ್ನು ಸೆರೆ ಹಿಡಿಯಬೇಕೆಂಬುದು ಜನರ ಆಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net