ಮಂಡ್ಯ: ತಾಲೂಕಿನ ಮಾಡ್ಲ ಗ್ರಾಮದಲ್ಲಿ ಬಳಿ ಮಂಗಳವಾರ ಬೆಳಗ್ಗೆ ಚಿರತೆ ಸೆರೆಯಾಗಿದೆ. ಕಳೆದ 15 ದಿನದಿಂದ ಈ ಭಾಗದಲ್ಲಿ ಚಿರತೆ ಉಪಟಳ ಹೆಚ್ಚಾಗಿತ್ತು. ಈ ದೂರಿನ ಮೇರೆಗೆ ಅರಣ್ಯದ ಇಲಾಖೆ ಸಿಬ್ಬಂದಿ ಬೋನು ಇಟ್ಟಿದ್ದರು. ಸೋಮವಾರ ರಾತ್ರಿ ಬೋನಿನಲ್ಲಿ ಇಟ್ಟಿದ್ದ ನಾಯಿ ತಿನ್ನಲು ಬಂದು ಚಿರತೆ ಸೆರೆಯಾಗಿದೆ. ಬೋನಿನಲ್ಲಿ ಸೆರೆ ಸಿಕ್ಕ ಚಿರತೆ ನೋಡಲು ಜನ ಮುಗಿಬಿದ್ದು ಕೆಲಕಾಲ ಗದ್ದಲ ಸೃಷ್ಟಿಸಿದರು. ಸೆರೆಯಾದ ಚಿರತೆಯನ್ನು ಅರಣ್ಯಕ್ಕೆ ಬಿಡಲು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಕ್ರಮ ವಹಿಸಿದ್ದಾರೆ.