ಬಾವಿಯೊಳಗೆ ಚಿರತೆ ಕಳೇಬರ ಪತ್ತೆ

cheetha- 1
Published on

ಕಾಸರಗೋಡು: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ದೇಲಂಪಾಡಿ ಪಂಚಾಯಿತಿ ಅಡೂರಿನ ತಲ್ಪಚ್ಚೇರಿ ನಿವಾಸಿ ಮೋಹನ್ ಎಂಬುವರ ಹಿತ್ತಿಲಲ್ಲಿರುವ ಉಪಯೋಗ ಶೂನ್ಯ ಬಾವಿಯಲ್ಲಿ ಚಿರತೆಯ ಕಳೇಬರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆವರಣಗೋಡೆಯಿಲ್ಲದ ಬಾವಿ ಇದಾಗಿದ್ದು, ಬಾವಿ ಮೇಲ್ಭಾಗಕ್ಕೆ ಬಲೆ ಹಾಸಲಾಗಿತ್ತು. ಶುಕ್ರವಾರ ರಾತ್ರಿ ಈ ಪ್ರದೇಶದಲ್ಲಿ ದುರ್ವಾಸನೆ ವ್ಯಾಪಿಸಿದ್ದ ಹಿನ್ನೆಲೆ ಬಾವಿಯೊಳಗೆ ನೋಡಿದಾಗ ಚಿರತೆ ಕಳೇಬರ ಪತ್ತೆಯಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಅರಣ್ಯಾಧಿಕಾರಿ ರಾಜು ಪೆರುಂಬಳ ನೇತೃತ್ವದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಚಿರತೆ ಮೇಲಕ್ಕೆತ್ತಿ ಪಶು ವೈದ್ಯರ ಮೂಲಕ ಪಂಚನಾಮೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net