ಸೀತೆ ಮಂಟಿಯ ಬಳಿ ಚಿರತೆ ಸೆರೆ

17BTP01
ಬೆಟ್ಟದಪುರದ ಹೊರವಲಯದಲ್ಲಿರುವ ಸೀತೆ ಮಂಟಿಯ ಬಳಿ ಬುಧವಾರ ಬೆಳಗ್ಗೆ ಆರು ವರ್ಷದ ಗಂಡು ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸೆರೆಯಾಗಿದೆ.
Published on

ಬೆಟ್ಟದಪುರ: ಬೆಟ್ಟದಪುರದ ಹೊರವಲಯದಲ್ಲಿರುವ ಸೀತೆ ಮಂಟಿಯ ಬಳಿ ಬುಧವಾರ ಬೆಳಗ್ಗೆ ಆರು ವರ್ಷದ ಗಂಡು ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ.

ಈ ವ್ಯಾಪ್ತಿಯ ಸುತ್ತಮುತ್ತಲಿನಲ್ಲಿರುವ ಜಮೀನು ಹಾಗೂ ತೋಟಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆಯು, ಶ್ವಾನ ಹಾಗೂ ಆಡು, ಕುರಿ, ಹಸುವಿನ ಕರುಗಳನ್ನು ಕೊಂದು ಜನರಿಗೆ ಗಾಬರಿ ಹುಟ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಒಂದು ತಿಂಗಳ ಹಿಂದಿನಿಂದ ಚಿರತೆಯ ಚಲನವಲನ ಗಮನಿಸಿ ಬೋನು ಇರಿಸಿದ್ದರು. ಬುಧವಾರ ಬೆಳಗ್ಗೆೆ ಚಿರತೆ ಬೋನಿನಲ್ಲಿ ಸೆರೆಯಾಗಿದೆ ಎಂದು ಬೆಟ್ಟದಪುರ ವಲಯದ ಅರಣ್ಯ ಅಧಿಕಾರಿ ಮಹೇಶ್ ತಿಳಿಸಿದರು.

ಚಿರತೆಯನ್ನು ನೋಡಲು ಅಕ್ಕಪಕ್ಕದ ಗ್ರಾಮದವರು ಆಗಮಿಸಿ ಇನ್ನು ಎರಡು, ಮೂರು ಚಿರತೆಗಳು ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತಿವೆ. ಅವುಗಳನ್ನು ಸೆರೆ ಹಿಡಿಯುವ ಕೆಲಸ ಮಾಡಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದರು.

ವೈದ್ಯಾಧಿಕಾರಿ ಡಾ.ಮುಜೀಫ್ ಸೆರೆ ಸಿಕ್ಕ ಚಿರತೆ ಆರೋಗ್ಯ ತಪಾಸಣೆ ನಡೆಸಿದರು. ನಾಗರಹೊಳೆ ಸಂರಕ್ಷಣಾ ಕೇಂದ್ರಕ್ಕೆ ಚಿರತೆಯನ್ನು ಬಿಡಲಾಯಿತು ಎಂದು ಆರ್‌ಎಫ್‌ಒ ಪದ್ಮಶ್ರೀ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net