

ಮೈಸೂರು: ತಾಲೂಕಿನ ವರುಣ ಹೋಬಳಿಯ ಮೋಸಂಬಾಯನಹಳ್ಳಿಯಲ್ಲಿ ಭಾನುವಾರ ಮೂರು ವರ್ಷದ ಹೆಣ್ಣು ಚಿರತೆಯೊಂದನ್ನು ಸೆರೆ ಹಿಡಿಯಲಾಗಿದೆ.
ಗ್ರಾಮದಲ್ಲಿ ಚಿರತೆಯು ಜಾನುವಾರುಗಳನ್ನು ಬಲಿ ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಚಿರತೆ ಸೆರೆಗೆ ಗ್ರಾಮಸ್ಥರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಗ್ರಾಮದಲ್ಲಿ ಬೋನು ಇರಿಸಲಾಗಿತ್ತು. ಮೈಸೂರು ವಿಭಾಗದಲ್ಲಿ ಏಪ್ರಿಲ್ 1 ರಿಂದ ಇಲ್ಲಿಯವರೆಗೆ 19 ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಈ ಪೈಕಿ ವಯಸ್ಸಾದ ಹಾಗೂ ಗಾಯಗೊಂಡ 3 ಚಿರತೆಗಳನ್ನು ಸಂರಕ್ಷಣಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.