ಮಾರಸಿಂಗನಹಳ್ಳಿಯಲ್ಲಿ ಚಿರತೆ ಸೆರೆ

30M.D.R.7
Published on

ಮದ್ದೂರು: ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದ ಗದ್ದೆಯಲ್ಲಿ ಇಟ್ಟಿದ್ದ ಬೋನಿಗೆ ಗುರುವಾರ ರಾತ್ರಿ ಚಿರತೆ ಸೆರೆಯಾಗಿದೆ.

ಗ್ರಾಮದ ನಾಗರಾಜು, ಚಿಕ್ಕಗೂಳಿಗೌಡ ಎಂಬುರಿಗೆ ಸೇರಿದ ಗದ್ದೆಯಲ್ಲಿ ಬೋನಿನಲ್ಲಿಟ್ಟಿದ್ದ ನಾಯಿಯನ್ನು ತಿನ್ನಲು ಬಂದ 6 ವರ್ಷದ ಗಂಡು ಚಿರತೆ ಸೆರೆಯಾಗಿದೆ. ಈ ಚಿರತೆ ಕಳೆದ ಹಲವಾರು ದಿನಗಳಿಂದ ಮಾರಸಿಂಗನಹಳ್ಳಿ ಸೇರಿದಂತೆ ಸುತ್ತಮುತ್ತಲ ವಿವಿಧ ಗ್ರಾಮಗಳಲ್ಲಿ ಸಂಚಾರ ಮಾಡಿ ಕುರಿ ಹಾಗೂ ಸಾಕು ನಾಯಿಗಳ ಮೇಲೆ ದಾಳಿ ಮಾಡಿ ಕೊಂದು ತಿನ್ನುತ್ತಿತ್ತು. ಇದರಿಂದ ಈ ಭಾಗದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು.

ಈ ಸಂಬಂಧ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಚಿರತೆ ಹಿಡಿಯುವಂತೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅಧಿಕಾರಿಗಳು ಬೋನ್ ಇಟ್ಟಿದ್ದರು. ಸ್ಥಳಕ್ಕೆ ತಾಲೂಕು ವಲಯ ಅರಣ್ಯಾಧಿಕಾರಿ ಗವಿಯಪ್ಪ, ಉಪ ವಲಯ ಅರಣ್ಯಾಧಿಕಾರಿ ಕಾಂತರಾಜು, ಗಸ್ತು ಅರಣ್ಯ ಪಾಲಕ ಚಿನ್ನಪ್ಪ ಅಗಮಿಸಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net