

ಮೈಸೂರು: ನಗರದ ಯಾದವಗಿರಿಯಲ್ಲಿ ಮಂಗಳವಾರ ಚಿರತೆಯೊಂದನ್ನು ಸೆರೆ ಹಿಡಿಯಲಾಗಿದೆ.
ಯಾದವಗಿರಿಯ ರಾಮಕೃಷ್ಣ ವಿದ್ಯಾಶಾಲಾ ಆವರಣದಲ್ಲಿ ಡಿ.10 ರಂದು ಚಿರತೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾ ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಚಿರತೆಯ ಸೆರೆಗೆ ಡಿ.11 ರಂದು ಬೋನು ಇರಿಸಲಾಗಿತ್ತು.
ಆ ನಂತರ ಡಿ.14 ರಂದು ಮತ್ತೊಂದು ಬೋನು ಇರಿಸಲಾಗಿತ್ತು. ಅಲ್ಲದೆ, ಚಿರತೆಯ ಚಲನವಲನ ಗಮನಿಸಲು ಕ್ಯಾಮರಾ ಅಳವಡಿಸಲಾಗಿತ್ತು. ಸೆರೆ ಸಿಕ್ಕ ಗಂಡು ಚಿರತೆ 4 ರಿಂದ 5 ವರ್ಷ ಪ್ರಾಯವಾಗಿರಬಹುದು ಎಂದು ಅಂದಾಜಿಸಲಾಗಿದೆ.