ಸಾಕು ಪ್ರಾಣಿಗಳ ಮೇಲೆ ಚಿರತೆ ದಾಳಿ

Published on

ತುರುವೇಕೆರೆ: ತಾಲೂಕಿನ ಮಂಗಿಕುಪ್ಪೆ ಸಮೀಪದ ಬೊಮ್ಮೇನಹಳ್ಳಿಯ ರಾಮಕೃಷ್ಣ ಎಂಬುವವರ ತೋಟದ ಮನೆಯ ಮುಂಭಾಗ ಕಟ್ಟಿದ್ದ ಎಮ್ಮೆ ಕರುವನ್ನು ಚಿರತೆ ಹೊತ್ತೊಯ್ದು ಸಾಯಿಸಿದೆ.

ಕಸಬಾ ವ್ಯಾಪ್ತಿಯ ಕೊಳಾಲದ ರೈತ ಕೃಷ್ಣೇಗೌಡ ಅವರ ಎಮ್ಮೆ ಕರುವಿನ ಮೇಲೂ ಚಿರತೆ ದಾಳಿ ಮಾಡಿದ್ದು, ಮನೆಯವರು ಕೂಗಾಡಿದಾಗ ಅಲ್ಲಿಂದ ಕಾಲ್ಕಿತ್ತಿದೆ. ಅದೇ ರೀತಿಯಾಗಿ ದಬ್ಬೇಘಟ್ಟದಲ್ಲೂ ಕೆಲ ರೈತರ ಮೇಕೆಗಳ ಮೇಲೆ ಚಿರತೆ ದಾಳಿ ಮುಂದುವರಿಸಿದ್ದು, ಜನರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.

ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕೊಳಾಲ, ಬೊಮ್ಮೇನಹಳ್ಳಿ ಮತ್ತು ದಬ್ಬೇಘಟ್ಟದಲ್ಲಿ ಬೋನ್​ ಇಟ್ಟಿದ್ದು, ನಾಲ್ಕೈದು ದಿನಗಳು ಕಳೆದರೂ ಬೋನ್​ಗೆ ಚಿರತೆ ಬೀಳದಿರುವುದು ಇಲಾಖೆಯ ನಿದ್ದೆಗೆಡಿಸಿದೆ. ಹಾಗಾಗಿ ಆರ್​ಎಫ್​ಒ ಅಮಿತ್ರ ಮತ್ತು ಸಿಬ್ಬಂದಿ ಚಿರತೆ ಕಂಡು ಬಂದ ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಅರಿವು ಮೂಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net