ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆರಗಿದ ಚಿರತೆ

leopard
Published on

ಮೈಸೂರು: ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತನ ಮೇಲೆ‌‌ ಹಠಾತ್ತಾಗಿ ಚಿರತೆಯೊಂದು ದಾಳಿ ನಡೆಸಿರುವ ಘಟನೆ ನಡೆದಿದೆ. ಹಾಡಹಗಲಿನಲ್ಲೇ ನಡೆದ ಈ ಚಿರತೆ ದಾಳಿಗೆ ಸಿಲುಕಿ 48 ವರ್ಷದ ಸಿದ್ದಪ್ಪ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಬೀರಂಬಳ್ಳಿಯಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಬಾಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾದ ಚಿರತೆ ಹಠಾತ್ ದಾಳಿ ನಡೆಸಿತು. ನಂತರ ರೈತನ ಚೀರಾಟದಿಂದ ಭಯಭೀತವಾಗಿ ಸ್ಥಳದಿಂದ ಪರಾರಿಯಾಯಿತು ಎನ್ನಲಾಗಿದೆ.

ರೈತ ಸಿದ್ದಪ್ಪನಿಗೆ ತಲೆ, ಮೂಗು ಮತ್ತು ತೊಡೆಗಳಿಗೆ ತೀವ್ರವಾಗಿ ರಕ್ತ ಬರುವಂತೆ ಗಾಯಗಳಾಗಿವೆ. ಅವರಿಗೆ ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಸ್ಥಳಾಂತರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net