ಚಿರತೆ ದಾಳಿ; ರುದ್ರಪ್ಪ ಲಮಾಣಿಗೆ ಗಂಭೀರ ಗಾಯ

28-RNR-01A
Published on

ರಾಣೆಬೆನ್ನೂರ: ಜಮೀನಿನ ಕೆಲಸಕ್ಕೆ ತೆರಳಿದ್ದ ರೈತರೊಬ್ಬರ ಮೇಲೆ ಚಿರತೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ತಾಲೂಕಿನ ಐರಣಿ ತಾಂಡದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ತಾಂಡಾ ನಿವಾಸಿ ರುದ್ರಪ್ಪ ಲಮಾಣಿ (47) ಚಿರತೆ ದಾಳಿಗೊಳಗಾದವರು.

ಇವರು ಬೆಳಗ್ಗೆ ಜಮೀನಿನ ಕೆಲಸಕ್ಕಾಗಿ ತೆರಳಿದ್ದರು. ಈ ಸಮಯದಲ್ಲಿ ದಾಳಿ ಮಾಡಿರುವ ಚಿರತೆ ರುದ್ರಪ್ಪನನ್ನು ಗಂಭೀರವಾಗಿ ಗಾಯಗೊಳಿಸಿದೆ. ರುದ್ರಪ್ಪನ ಕೂಗಾಟ ಕೇಳಿದ ಸುತ್ತಲಿನ ಜನತೆ ಓಡಿ ಬಂದು ಚಿರತೆ ಓಡಿಸಿದ್ದಾರೆ. ನಂತರ ಅವರನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಐರಣಿ, ಯಕ್ಲಾಸಪುರ, ಮೇಡ್ಲೇರಿ, ಹಿರೇಬಿದರಿ ಸೇರಿ ಸುತ್ತಲಿನ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು ಅರಣ್ಯಾಧಿಕಾರಿಗಳು ಚಿರತೆಗಳನ್ನು ಸೆರೆಹಿಡಿದು ಬೇರೆಡೆ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net