ಮೇಕೆ ಮೇಲೆ ಚಿರತೆ ದಾಳಿ

Oplus_0
ಯಳಂದೂರು ತಾಲೂಕಿನ ವಡಗೆರೆ ಗ್ರಾಮದಲ್ಲಿ ಚಿರತೆ ದಾಳಿಯಿಂದ ಗಾಯಗೊಂಡಿರುವ ರಾಮೇಗೌಡ ಎಂಬ ರೈತರಿಗೆ ಸೇರಿದ ಮೇಕೆ
Published on

ಯಳಂದೂರು : ತಾಲೂಕಿನ ವಡಗೆರೆ ಗ್ರಾಮದಲ್ಲಿ ಮೇಕೆಯೊಂದರ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ. ಗ್ರಾಮದ ರೈತ ರಾಮೇಗೌಡ ಅವರ ಜಮೀನಿನಲ್ಲಿ ಮೇಕೆಯನ್ನು ಕಟ್ಟಿ ಹಾಕಲಾಗಿತ್ತು. ರಾತ್ರಿವೇಳೆ ಬಂದ ಚಿರತೆ ಮೇಕೆಯ ಮೇಲೆ ದಾಳಿ ಮಾಡಿದೆ. ಈ ಸಂದರ್ಭದ ಅಲ್ಲಿಯೇ ಇದ್ದ ರಾಮೇಗೌಡ ಮೇಕೆ ಚೀರಾಟ ಕೇಳಿ ಓಡಿ ಬಂದಾಗ ಚಿರತೆ ಓಡಿಹೋಗಿದೆ. ತೀವ್ರ ಗಾಯಗೊಂಡಿರುವ ಮೇಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದು ಇಲಾಖೆಯ ನೌಕರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಿರತೆ ಕಾಟ ತಪ್ಪಿಸಿ: ಗ್ರಾಮದಲ್ಲಿ ನಿರಂತರವಾಗಿ ಚಿರತೆ ಕಾಟ ನೀಡುತ್ತಿದೆ. ಕಳೆದ ತಿಂಗಳು ರಮೇಶ್ ಅವರ ಕರುವೊಂದನ್ನು ಚಿರತೆ ಎಳೆದೊಯದ್ದು ತಿಂದು ಹಾಕಿತ್ತು. ಅಲ್ಲದೆ ಕಿರಣ್ ಅವರ ಸಾಕು ನಾಯಿಯನ್ನು ತಿಂದು ಹಾಕಿದೆ. ನಿತ್ಯ ಇದು ಇಲ್ಲೇ ಅಡ್ಡಾಡುತ್ತಿದೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ ಅವರು ಕ್ರಮ ವಹಿಸುತ್ತಿಲ್ಲ. ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ಕಾಯಲು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದು ಹೋರಾಟ ಮಾಡಬೇಕಾದ ಸ್ಥಿತಿ ಇದೆ. ಕಾಡಾನೆ, ಕಾಡುಹಂದಿ, ಜಿಂಕೆ, ಕಡವೆ, ನವಿಲುಗಳಿಂದ ಬೆಳೆ ರಕ್ಷಣೆ ಮಾಡಿಕೊಳ್ಳಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಾಡು ಪ್ರಾಣಿಗಳು ನಾಡಿಗೆ ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net