ಚಿರತೆ ದಾಳಿಗೆ 32 ಕುರಿ ಸಾವು

Published on

ಮಧುಗಿರಿ: ತಾಲೂಕಿನ ದೊಡ್ಡಹೊಸಹಳ್ಳಿಯಲ್ಲಿ ಮಂಗಳವಾರ ಮುಂಜಾನೆ ಚಿರತೆಗಳ ಹಿಂಡೊಂದು ದಾಳಿಗೆ 32 ಕುರಿಗಳು ಮೃತಪಟ್ಟಿವೆ. ಗ್ರಾಮದ ಕುರಿಗಾಹಿ ಮಲ್ಲಣ್ಣಗೆ ಸೇರಿದ 32 ಕುರಿಗಳು ಚಿರತೆ ದಾಳಿಗೆ ಬಲಿಯಾಗಿವೆ. ಕೊಟ್ಟಿಗೆಯಲ್ಲಿ ಕುರಿಗಳ ಕೂಗಾಟ ಕೇಳಿ ಮಲ್ಲಣ್ಣ ಮತ್ತು ಕುಟುಂಬದವರು ಬಂದು ನೋಡಿದಾಗ 5 ಚಿರತೆಗಳು ಕುರಿಗಳ ಮೇಲೆ ಆಕ್ರಮಣ ಮಾಡಿದ್ದು, ಜನರು ಬರುತ್ತಿದ್ದಂತೆ ಓಡಿಹೊಗಿವೆ. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಸುರೇಶ್​, ಪಶುಸಂಗೋಪನೆ ಇಲಾಖೆ ಹಿರಿಯ ಸಹಾಯ ನಿರ್ದೇಶಕ ಸಿದ್ದನಗೌಡ, ಉಪವಲಯ ಅರಣ್ಯಾಧಿಕಾರಿ ಮುತ್ತುರಾಜ್​ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net