ಚಿರತೆ ದಾಳಿಗೆ 2 ನಾಯಿಗಳು ಬಲಿ: ಆತಂಕದಲ್ಲಿ ಚಿಕ್ಕಂಕನಹಳ್ಳಿ ಗ್ರಾಮಸ್ಥರು

1 (3)
Published on

ಮಂಡ್ಯ: ಮದ್ದೂರು ತಾಲೂಕಿನ ಚಿಕ್ಕಂಕನಹಳ್ಳಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ನಂದಿ ಬಸವೇಶ್ವರ ದೇವಸ್ಥಾನದ ಹೊರ ಆವರಣದಲ್ಲಿ ಮಲಗಿದ್ದ ನಾಯಿಗಳ ಮೇಲೆ ಚಿರತೆ ದಾಳಿ ಮಾಡಿ ಸಾಯಿಸಿದೆ.

ದಾಳಿಯಿಂದ ದೇವಸ್ಥಾನ ಹೊರ ಆವರಣದಲ್ಲಿ ರಕ್ತಮಯವಾಗಿದ್ದು ಹಾಗೂ ಸುಮಾರು ದೂರ ರಕ್ತ ಹರಡಿರುವುದನ್ನು ಗಮನಿಸಿದ ದೇಗುಲದ ಅರ್ಚಕ ಕಲ್ಲೇಶ್ ಮತ್ತು ಗ್ರಾಮಸ್ಥರು ಆತಂಕಗೊಂಡು ಏನೋ ಆಗಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಪರಿಶೀಲನೆ ಮಾಡಿದ ನಂತರ ದೇವಾಲಯ ಆವರಣದಲ್ಲಿ ಮಲಗಿದ್ದ 2 ನಾಯಿಗಳನ್ನು ಚಿರತೆ ಕುತ್ತಿಗೆ ಹಿಡಿದು ರಕ್ತ ಕುಡಿದು ಎಳೆದುಕೊಂಡು ಹೋಗಿ ಸಾಯಿಸಿ ಹೋಗಿದೆ. ಆದ್ದರಿಂದ ದೇಗುಲದ ಹೊರ ಆವರಣದಲ್ಲಿ ರಕ್ತಮಯವಾಗಿದೆ. ಈ ಬಗ್ಗೆ ಯಾವುದೇ ಅತಂಕ ಪಡುವುದು ಬೇಡ. ಚಿರತೆ ಹಿಡಿಯಲು ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಗ್ರಾಮಸ್ಥರು ನಿರಾಳವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net