ಚಿರತೆ ದಾಳಿಗೆ ಕರು ಬಲಿ

leopard
Published on

ಮಧುರೆ:ದೊಡ್ಡಬಳ್ಳಾಪುರ ತಾಲೂಕು ಕರಡಿಪಾಳ್ಯದ ಕೊಟ್ಟಿಗೆಯಲ್ಲಿ ಕರುವಿನ ಮೇಲೆ ದಾಳಿ ನಡೆಸಿದ ಚಿರತೆ ಅರೆಬರೆ ಭಕ್ಷಣೆ ಮಾಡಿ ಪರಾರಿಯಾಗಿದೆ.

ಗುರವಾರ ತಡರಾತ್ರಿ ಪ್ರಕರಣ ನಡೆದಿದ್ದು ಶುಕ್ರವಾರ ಮುಂಜಾನೆ ಬೆಳಕಿಗೆ ಬಂದಿದೆ. ಕರಡಿಪಾಳ್ಯದ ನಿವಾಸಿ ತಿರುಪತಯ್ಯ ಎಂಬುವರ ಮನೆ ಪಕ್ಕದಲ್ಲೇ ಹಸುಗಳಿಗಾಗಿ ಶೆಡ್ ನಿರ್ಮಿಸಿ ಎರಡು ಹಸು, ಎರಡು ಕರುಗಳನ್ನು ಕಟ್ಟಿಹಾಕಲಾಗಿತ್ತು. ಶೆಡ್ ಒಳಗೆ ನುಗ್ಗಿದ ಚಿರತೆ ಒಂದು ಕರುವನ್ನು ಎಳೆದೊಯ್ದಿದೆ. ಘಟನೆ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿತ್ತು. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಸೆರೆ ಹಿಡಿಯಲು ಗ್ರಾಮದಲ್ಲಿ ಬೋನ್ ಇರಿಸಲಾಗಿದೆ. ಸಂಜೆ ಬಳಿಕ ಅರಣ್ಯದಂಚಿನ ಕಡೆಗಳಿಗೆ ಒಬ್ಬಂಟಿಯಾಗಿ ಜನರು ಸಂಚರಿಸದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಸರಣಿ ಪ್ರಕರಣ:

ಕಳೆದ ಮಂಗಳವಾರವಷ್ಟೇ ದೊಡ್ಡಬೆಳವಂಗಲ ಹೋಬಳಿಯ ಗುಂಡ್ಲಹಳ್ಳಿಯಲ್ಲಿ ಹಸುವಿನ ಮೇಲೆ ಚಿರತೆ ದಾಳಿ ಮಾಡಿತ್ತು. ಅದೇ ದಿನ ರಾತ್ರಿ ತೂಬಗೆರೆ ಹೋಬಳಿಯ ಮಾಕಳಿ ಸಮೀಪದ ತೋಟದ ಮನೆಯಲ್ಲಿದ್ದ ನಾಯಿಯನ್ನು ಕೊಂದುಹಾಕಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net