ಶಾಸಕ ಐಹೊಳೆ ಬೆಂಬಲಿಗರ ಸಂಭ್ರಮ

1010
Published on

ರಾಯಬಾಗ: ಶಾಸಕ ಡಿ.ಎಂ.ಐಹೊಳೆ ಅವರು ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಪಟ್ಟಣದ ಝೇಂಡಾ ಕಟ್ಟೆ ಹತ್ತಿರ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಬಳಿಕ ಮಾತನಾಡಿದ ಚಿಕ್ಕೋಡಿ ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಸದಾಶಿವ ಹುಂಜ್ಯಾಗೋಳ, ಮೀಸಲು ಕ್ಷೇತ್ರವಾದ ರಾಯಬಾಗ ಶಾಸಕ ಡಿ.ಎಂ.ಐಹೊಳೆ ಅವರಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ದೊರಕಿದ್ದು ಸಂತಸ ತಂದಿದೆ. ಶಾಸಕರು ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.

ಮಹೇಶ ಕರಮಡಿ, ಸುರೇಶ ಮಾಳಿ, ಜಿಯಾವುಲ್ಲಾ ಮುಲ್ಲಾ, ಸದಾನಂದ ಹಳಿಂಗಳಿ, ಅಜ್ಜಪ್ಪ ಕುಲಗುಡೆ, ಸಂಗಣ್ಣ ದತ್ತವಾಡೆ ಸೇರಿ ಶಾಸಕರ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net