

ಘಟಪ್ರಭಾ: ಲಾಕ್‌ಡೌನ್‌ನಿಂದಾಗಿ ಸಮಸ್ಯೆ ಅನುಭವಿಸುತ್ತಿರುವ ಮತಕ್ಷೇತ್ರದ 76 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಸ್ವಂತ ದುಡ್ಡಿನಲ್ಲಿ ಆಹಾರ ಧಾನ್ಯದ ಕಿಟ್ ವಿತರಿಸುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಕಾರ್ಯವನ್ನು ಶ್ಲಾಸಿರುವ ಪ್ರಭಾಶುಗರ್ಸ್ ಅಧ್ಯಕ್ಷ ಅಶೋಕ ಪಾಟೀಲ, ಈ ಭಾಗದಲ್ಲಿ ಅವರು ನಡೆದಾಡುವ ದೇವರು ಎಂದು ಬಣ್ಣಿಸಿದ್ದಾರೆ.
ಪ್ರಭಾಶುಗರ್ಸ್ ಆವರಣದಲ್ಲಿ ಶನಿವಾರ ಕಾರ್ಖಾನೆ ಕಾರ್ಮಿಕರು, ಸಿಬ್ಬಂದಿ ಮತ್ತು ಅಲ್ಲಿನ ನಿವಾಸಿಗಳಿಗೆ ಬಾಲಚಂದ್ರ ಜಾರಕಿಹೊಳಿ ಅವರು ಕೊಡಮಾಡಿದ ಆಹಾರ ಧಾನ್ಯಗಳ ಕಿಟ್ ವಿತರಿಸಿ ಮಾತನಾಡಿ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಬಾಲಚಂದ್ರ ಜಾರಕಿಹೊಳಿ ಎಲ್ಲ ವರ್ಗಗಳ ಜನರ ಹಿತರಕ್ಷಣೆಗೆ ದುಡಿಯುತ್ತಿದ್ದಾರೆ.ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲರೂ ಕರೊನಾ ಸೋಂಕು ನಿಯಂತ್ರಣಕ್ಕೆ ಸಹಕಾರ ನೀಡುವಂತೆ ಕೋರಿದರು.
ಪ್ರಭಾಶುಗರ್ಸ್ ಉಪಾಧ್ಯಕ್ಷ ರಾಮಣ್ಣ ಮಹಾರಡ್ಡಿ, ಬಸಗೌಡ ಪಾಟೀಲ, ಕೆಂಚಗೌಡ ಪಾಟೀಲ, ಕೃಷ್ಣಪ್ಪ ಬಂಡ್ರೊಳ್ಳಿ, ಭೂತಪ್ಪ ಗೊಡೇರ, ಲಕ್ಷ್ಮಣ ಗಣಪ್ಪಗೋಳ, ಶಿವಲಿಂಗ ಪೂಜೇರಿ, ಶಿದ್ಲಿಂಗ ಕಂಬಳಿ, ಲಕ್ಕವ್ವ ಬೆಳಗಲಿ, ವರ್ತಕ ವಿಕ್ರಂ ಅಂಗಡಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟಿ, ಲೆಕ್ಕಪರಿಶೋಧಕ ಸೈದಪ್ಪ ಗದಾಡಿ, ಟೀಂ ಎನ್‌ಎಸ್‌ಎ್ನ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ, ಸಿ.ಪಿ.ಯಕ್ಷಂಬಿ, ಒ.ಎಸ್.ಜಂಬಗಿ, ಸಿಡಿಒ ಜೆ.ಆರ್.ಬಬಲೇಶ್ವರ, ಸ್ಥಳೀಯ ನಿವಾಸಿಗಳು ಮತ್ತಿತರರು ಉಪಸ್ಥಿತರಿದ್ದರು.
ಮೂಡಲಗಿ ವರದಿ: ಸಮೀಪದ ನಾಗನೂರ ಪಟ್ಟಣದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೊಡಮಾಡಿದ ದಿನಸಿ ವಸ್ತುಗಳ ಕಿಟ್‌ಗಳನ್ನು ಶನಿವಾರ ಬಡವರಿಗೆ ವಿತರಿಸಲಾಯಿತು. ಸಿಪಿಐ ವೆಂಕಟೇಶ ಮುರನಾಳ, ಶಾಸಕರ ಆಪ್ತಕಾರ್ಯದರ್ಶಿ ನಾಗೇಶ ಶೇಖರಗೋಳ, ತಹಸೀಲ್ದಾರ್ ದಿಲಶಾದ್ ಮಹಾತ, ಬಿಇಒ ಅಜೀತ ಮನ್ನಿಕೇರಿ, ಪ್ರಭಾ ಶುಗರ್ಸ್ ನಿರ್ದೇಶಕ ಕೆಂಚನಗೌಡ ಪಾಟೀಲ ಇದ್ದರು.