6 ರಿಂದ ಲೆಜೆಂಡ್ ಕ್ರಿಕೆಟ್ ಪಂದ್ಯಾವಳಿ

Legend Cricket Tournament from 6
Published on

ಇಳಕಲ್ಲ(ಗ್ರಾ): ಇಳಕಲ್ಲ ಲೆಜೆಂಡ್ ಲೀಗ್ ಕ್ರಿಕೆಟ್ ಸಂಸ್ಥೆ ವತಿಯಿಂದ ಜೂ. 6 ರಿಂದ ಮೂರು ದಿನ ಕ್ರಿಕೆಟ್ ಪಂದ್ಯಾವಳಿಯನ್ನು ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಹನುಮಂತ ಚುಂಚಾ ತಿಳಿಸಿದ್ದಾರೆ.

ಎಂಟು ತಂಡಗಳ ನಡುವೆ ಪಂದ್ಯಾಟಗಳು ನಡೆಯಲಿವೆ. ಎ ಮತ್ತು ಬಿ ಗ್ರೂಪ್‌ನಲ್ಲಿ ನಾಲ್ಕು ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಲಿವೆ. ಅದರಲ್ಲಿ ಮೊದಲ ಸ್ಥಾನ ಗಳಿಸಿದ ತಂಡ ೈನಲ್ ಹಂತಕ್ಕೆ ತಲುಪಲಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಎ ಗ್ರೂಪ್‌ದಲ್ಲಿ ಎಸ್‌ಆರ್‌ಕೆಸಿಸಿ, ಜೈ ಭೀಮ್ ಸಿಸಿ, ಕಪಿಲ್ ಸಿಸಿ , ಎನ್‌ಕೆಎಸ್‌ಸಿಎ ಸಿಸಿ ತಂಡಗಳಿವೆ. ಬಿ ಗ್ರೂಪ್‌ದಲ್ಲಿ ತಾಜ್ ಸಿಸಿ, ಲಯನ್ ಸಿಸಿ, ಸುಲ್ತಾನ್ ಸಿಸಿ ಮತ್ತು ಎನ್‌ಜೆಸಿಸಿ ತಂಡಗಳಿವೆ.

ಪ್ರಥಮ ಸ್ಥಾನ ಗಳಿಸುವ ತಂಡ 25 ಸಾವಿರ ನಗದು ಮತ್ತು ಕಪ್ ,ದ್ವಿತೀಯ ಸ್ಥಾನ ಗಳಿಸುವ ತಂಡ 15 ಸಾವಿರ ರೂ. ನಗದು ಮತ್ತು ಕಪ್, ತೃತೀಯ ಸ್ಥಾನ ಗಳಿಸುವ ತಂಡ 10 ಸಾವಿರ ರೂ. ನಗದು ಮತ್ತು ಕಪ್ ಪಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net