

ಅಂಕೋಲಾ: ದೈನಂದಿನ ಬದುಕನ್ನು ಕಾನೂನಾತ್ಮಕವಾಗಿ ಸರಳೀಕರಣಗೊಳಿಸುವ ಕಾರ್ಯ ನೋಟರಿಗಳಿಂದ ಆಗುತ್ತದೆ. ಕೆಲವು ದಾಖಲಾತಿಯ ಬರಹಗಳನ್ನು ನೋಟರಿಗಳು ಪ್ರಮಾಣೀಕರಿಸುವುದರಿಂದ ಜನಸಾಮಾನ್ಯರು ನ್ಯಾಯಾಲಯಕ್ಕೆ ಅನಗತ್ಯವಾಗಿ ಅಲೆಯುವುದು ತಪ್ಪುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮನೋಹರ ಎಂ. ಹೇಳಿದರು.
ಇಲ್ಲಿನ ಅಂಕೋಲಾ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ಉ.ಕ. ಜಿಲ್ಲಾ ನೋಟರಿಗಳ ಸಂಘ, ತಾಲೂಕು ಕಾನೂನು ಸಮಿತಿ ಹಾಗೂ ನಿಸರ್ಗ ಸಂಪನ್ಮೂಲ ಕೇಂದ್ರ ಅಂಕೋಲಾ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ನೋಟರಿ ಪಬ್ಲಿಕ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ನೋಟರಿಗಳ ಸಂಘದ ಅಧ್ಯಕ್ಷ ನಾಗಾನಂದ ಐ. ಬಂಟ ಮಾತನಾಡಿ, ದೈನಂದಿನ ಬದುಕಿನಲ್ಲಿ ನೋಟರಿಗಳ ಕಾರ್ಯ ಮಹತ್ವದ್ದಾಗಿರುತ್ತದೆ. ಸಂವಿಧಾನಾತ್ಮಕ ಮತ್ತು ಕಾನೂನಾತ್ಮಕ ಜವಾಬ್ದಾರಿಗಳ ಜೊತೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ಕೆಲವು ಕಡೆ ನೋಟರಿಗಳ ಕಾರ್ಯವೂ ದುರ್ಬಳಕೆಯಾಗುತ್ತಿರುವುದು ಖೇದಕರ ಎಂದರು.
ಹಿರಿಯ ನೋಟರಿ ಸುಭಾಷ ನಾರ್ವೆಕರ ಮಾತನಾಡಿದರು. ವಕೀಲ ವಿನೋದ ಶಾನಭಾಗ, ಸರ್ಕಾರಿ ಸಹಾಯಕ ಅಭಿಯೋಜಕಿ ಶಿಲ್ಪಾ ನಾಯ್ಕ, ಮೈರಾಡ ಸಂಸ್ಥೆ ಸಂಯೋಜಕ ಅಶೋಕ ಗೌಡ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶರಾದ ಮನೋಹರ ಎಂ., ಅರ್ಪಿತಾ ಬೆಲ್ಲದ, ಹಿರಿಯ ವಕೀಲರಾದ ಸುಭಾಶ ನಾರ್ವೆಕರ ಅವರನ್ನು ಸನ್ಮಾನಿಸಲಾಯಿತು. ಸರ್ಕಾರಿ ಸಹಾಯಕ ಅಭಿಯೋಜಕ ಗಿರೀಶ ಪಟಗಾರ, ವಕೀಲರಾದ ಆರ್.ಟಿ. ಗೌಡ, ಬಿ.ಟಿ. ನಾಯಕ, ಅಕ್ಷಯ ನಾರ್ವೆಕರ್, ಗಜಾನನ ನಾಯ್ಕ, ಮಮತಾ ಕೆರೆಮನೆ, ತೇಜು ಬಂಟ, ಇತರರಿದ್ದರು. ಗುರು ನಾಯ್ಕ, ಉಮೇಶ ನಾಯ್ಕ ಹಾಗೂ ಸುರೇಶ ಬಾನವಳಿಕರ ಕಾರ್ಯಕ್ರಮ ನಿರ್ವಹಿಸಿದರು.