ಮಂಗಳೂರು: ಎಸ್‌ಐಆರ್‌ನಿಂದಾಗಿ ವಿವಿಧ ರಾಜ್ಯಗಳಲ್ಲಿ ಲಕ್ಷಾಂತರ ಮಂದಿ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಎಸ್‌ಐಆರ್ ವಿರುದ್ಧ ಕರ್ನಾಟಕದಿಂದ ಕಾನೂನಾತ್ಮಕ ಹೋರಾಟ ನಡೆಯಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು. ಶುಕ್ರವಾರ ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಸ್‌ಐಆರ್ ಮೂಲಕ ಯಾರ ಮತಗಳನ್ನು ತೆಗೆಯಬೇಕೋ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯುತ್ತಿದ್ದಾರೆ. ಇದೊಂದು ವ್ಯವಸ್ಥಿತ ಸಂಚು. ಚುನಾವಣೆ ಆಯೋಗವನ್ನು ಯಾರೂ ಪ್ರಶ್ನಿಸದಂತೆ ಕಾನೂನುಗಳನ್ನು ತರಲಾಗಿದೆ. ಚುನಾವಣೆ ಆಯೋಗದ ನೇಮಕತಿಯಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನು ತೆಗೆದು ಹಾಕಲಾಗಿದೆ. ಚುನಾವಣೆ ಆಯೋಗ, ಇಡಿ, ಐಟಿಯನ್ನು ಕೇಂದ್ರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದರು.