

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆ ಸಮಿತಿ ಬೆಳ್ತಂಗಡಿ ವಕೀಲರ ಸಂಘ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಆಳದಂಗಡಿ ಸಂಯುಕ್ತ ಆಶಯದಲ್ಲಿ ಆಳದಂಗಡಿ ಕಾಲೇಜು ಸಭಾಭವನದಲ್ಲಿ ಪೋಕ್ಸೋ ಕಾಯ್ದೆ ಮತ್ತು ಬಾಲ್ಯವಿವಾಹ ಕುರಿತು ಕಾನೂನು ಅರಿವು ಕಾರ್ಯಕ್ರಮ ನಡೆಯಿತು.
jmfc ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್. ಉದ್ಘಾಟಿಸಿ ಮಾತನಾಡಿ, ಕಾನೂನಿನ ಚೌಕಟ್ಟಿನಲ್ಲಿ ಬದುಕಿದಾಗ ಆದರ್ಶಮಯ ಬದುಕು ಸಾಗಿಸಬಹುದು. ವಿದ್ಯಾರ್ಥಿಗಳು ಶಿಸ್ತು, ಸಂಯಮ ರೂಢಿಸಿಕೊಂಡು ಓದಿದಾಗ ಆದರ್ಶ ವ್ಯಕ್ತಿಯಾಗಲು ಸಾಧ್ಯ ಎಂದರು.
ವಕೀಲೆ ಅಸ್ಮಾ ಕಾನೂನು ಮಾಹಿತಿ ನೀಡಿದರು. ಸಂಸ್ಥೆ ಪ್ರಾಂಶುಪಾಲ ಸನ್ನಿ ಕೆ ಎಂ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘ ಅಧ್ಯಕ್ಷ ವಸಂತ ಮರಕಡ, ನ್ಯಾಯವಾದಿ ನವೀನ್ ಬಿ.ಕೆ, ಪ್ಯಾರಾ ಲೀಗಲ್ ಕಮಿಟಿ ಸದಸ್ಯ ರಾಘವೇಂದ್ರ ಶೇಟ್, ದಯಾನಂದ, ಪುಷ್ಪಲತಾ ಉಪಸ್ಥಿತರಿದ್ದರು. ಅರ್ಥಶಾಸ ಉಪನ್ಯಾಸಕ ಹರೀಶ್ ರೈ ಸ್ವಾಗತಿಸಿ, ಗಣಿತ ಉಪನ್ಯಾಸಕ ಸದಾನಂದ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯಶಾಸ ಉಪನ್ಯಾಸಕ ಜಯ ಪೂಜಾರಿ ವಂದಿಸಿದರು.