ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ

Law education Programme
Published on

ಭಟ್ಕಳ: ತಾಲೂಕಿನ ಸರಕಾರಿ ಪ್ರೌಢಶಾಲೆ ಜಾಲಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ (ಎನ್.ಎಸ್.ಎಸ್.)ಆಶ್ರಯದಲ್ಲಿ ’ಕಾನೂನು ಅರಿವು’ ಕಾರ್ಯಕ್ರಮ ನಡೆಯಿತು.

ಭಟ್ಕಳ ಡಿ. ವೈ.ಎಸ್.ಪಿ ಕಚೇರಿಯ ಹೆಡ್ ಕಾನ್​ಸ್ಟೆಬಲ್ ಮಾರುತಿ ಜೆ. ನಾಯ್ಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಡ್ರಗ್ಸ್ ಬಳಕೆಯ ಅಪರಾಧಗಳು, ವಾಹನ ಚಾಲನೆ ಮತ್ತು ಸಂಚಾರಿ ನಿಯಮಗಳು, ಮೊಬೈಲ್ ಬಳಕೆ ಮತ್ತು ಸುಳ್ಳುಸುದ್ದಿ ಹರಡುವಿಕೆಯ ಕುರಿತ ಕಾನೂನುಗಳ ಮಾಹಿತಿ ನೀಡಿದರು.

ಶಾಲಾ ಮುಖ್ಯೋಪಾಧ್ಯಾಯೆ ಶಾರದಾ ನಾಯ್ಕ ಕಾಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟಿ›ೕಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಶ್ರೀಧರ ಶೇಟ್ ಸ್ವಾಗತಿಸಿದರು. ಕನ್ನಡ ಭಾಷಾ ಶಿಕ್ಷಕಿ ರೇಣುಕಾ ನಾಯಕ ವಂದಿಸಿದರು.

ತಿಮ್ಮಪ್ಪ ದೇವಾಡಿಗ, ಜಯಂತಿ ನಾಯಕ, ಶೋಭಾ ಗೌಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net