Legal Awareness Assistance Program

9 Dwd 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದಿರಬೇಕು. ಕಾನೂನು ಸೇವೆಗಳ ಪ್ರಾಽಕಾರದಿಂದ ನೆರವು ಪಡೆಯಬೇಕು ಎಂದು ಪ್ರಭಾರ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ರಾಜಕುಮಾರ ಸಿ. ಹೇಳಿದರು.

ನಗರದ ಹುರಕಡ್ಲಿ ಅಜ್ಜ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನ್ಯಾಯಾಧೀಶರಾದ ನಾಗರಾಜಪ್ಪ ಎ.ಕೆ., ಪರಶುರಾಮ ದೊಡ್ಡಮನಿ ಮಾತನಾಡಿದರು.

ಪ್ರಾಚಾರ್ಯೆ ಡಾ. ಸವಿತಾ ಎಲ್. ಪಾಟೀಲ ಸ್ವಾಗತಿಸಿದರು. ಸಂಸ್ಥೆಯ ಕಾರ್ಯಾಧ್ಯಕ್ಷ ಆರ್.ಯು. ಬೆಳ್ಳಕ್ಕಿ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ವಕೀಲ ಆರ್.ಕೆ. ನಾವಲಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಉಪನ್ಯಾಸಕರಾದ ಡಾ. ಎಸ್.ಎಸ್. ಗಾಳಿಮಠ, ಅಭಿಷೇಕ ಎಂ.ವೈ., ಮಂಜುಳಾ ಬಿ.ಎಸ್., ಬಸವರಾಜ ಟಿ., ಇತರರಿದ್ದರು.

ಕಾನೂನು ಸೇವೆಗಳ ಘಟಕದ ಸಂಯೋಜಕ ಅಭಿಷೇಕ ಜಹಗೀರದಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net