

ನರೇಗಲ್ಲ: ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸದಾ ಸಿದ್ಧವಾಗಿದ್ದು, ಯಾವುದೇ ಅಹಿತಕರ ಘಟನೆ ಜರುಗದಂತೆ ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಪಿಎಸ್‌ಐ ನಿಖೀಲ ಕಾಂಬಳೆ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಂಜೆ ಕರೆಯಲಾಗಿದ್ದ ಮೊಹರಂ ಹಬ್ಬದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಹಿಂದು-ಮುಸ್ಲಿಂ ಭಾವೈಕ್ಯತೆಯ ಮೊಹರಂ ಹಬ್ಬವನ್ನು ಎಲ್ಲರೂ ಶಾಂತಿಯಿಂದ ಆಚರಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಮುಸ್ಲಿಂ ಬಾಂಧವರೊಂದಿಗೆ ಮೊಹರಂ ಹಬ್ಬವನ್ನು ಹಿಂದುಗಳು ಸಹ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಹಬ್ಬದ ಆಚರಣೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ಪೊಲೀಸರೊಂದಿಗೆ ಸಹಕರಿಸಿ. ಹಬ್ಬದ ವೇಳೆ ಯಾರಾದರೂ ಅಹಿತಕರ ಘಟನೆಯನ್ನು ನಡೆಸುವುದು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಎಂ.ಎಸ್ ಧಡೇಸೂರಮಠ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಎ.ಎ. ನವಲಗುಂದ, ಎಎಸ್‌ಐ ಶೇಖರ ಹೊಸಳ್ಳಿ, ಕೆ.ಆರ್.ಬೆಲೇರಿ, ಅಲ್ಲಾಭಕ್ಷ ನದಾಫ್, ಕುಮಾರಸ್ವಾಮಿ ಕೋರಧಾನ್ಯಮಠ, ನಿಂಗಪ್ಪ ಲಕ್ಕನಗೌಡ್ರ, ಪ್ರಕಾಶ ಪಿಡಗೊಂಡ, ಉಮೇಶ ಮೇಟಿ, ಶೇಖಪ್ಪ ಕೆಂಗಾರ, ನಜೀರಸಾಬ ಇಟಗಿ, ಮಹೇಶ ಒಳಕೊಟಿ, ಕಿರಣ ಹಿರೇಮಠ, ಮಾರ್ತಾಂಡ ಉಪ್ಪಾರ, ಮಂಜುನಾಥ ಪೂಜಾರ, ಮಂಜುನಾಥ ಬಜಂತ್ರಿ, ವಿಜಯ ಗೊದಿಗನೂರ, ಬಸವರಾಜ ಕುರಿ ಸೇರಿದಂತೆ ಸಿಬ್ಬಂದಿಗಳು ಇದ್ದರು.