

ಮೈಸೂರು: ಸೆಸ್ಕಾಂ ಜಾಗೃತದಳದ ವತಿಯಿಂದ ಎಲ್ಲಾ ಕಡೆ ಬಿರುಸಿನ ಕಾರ್ಯಚರಣೆಯನ್ನು ಕೈಗೊಂಡು ಪರಿಶೀಲನೆ ನಡೆಸುತ್ತಿದ್ದು, ಅನಧಿಕೃತ ವಿದ್ಯುತ್ ಸ್ಥಾವರಗಳು ಹಾಗೂ ವಿದ್ಯುತ್ ಕಳ್ಳತನ ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸೆಸ್ಕಾಂ ಜಾಗೃತದಳದ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿರುತ್ತಾರೆ.
ಹಾಗೆಯೇ ಅನಧಿಕೃತ ವಿದ್ಯುತ್ ಸಂಪರ್ಕ ಮತ್ತು ವಿದ್ಯುತ್ ಕಳ್ಳತನ ಮಾಡುತ್ತಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ಸೆಸ್ಕ್ ಜಾಗೃತದಳದ ಪೊಲೀಸ್ ಅಧೀಕ್ಷಕರ ದೂ.ಸಂ. 9448499964, ಪೊಲೀಸ್ ಉಪಾಧೀಕ್ಷಕರ ದೂ.ಸಂ. 9448994735, ಕಾರ್ಯನಿರ್ವಾಹಕ ಇಂಜಿನಿಯರ್‌ರವರ ದೂ.ಸಂ. 9448994716, ಸೆಸ್ಕ್ ಜಾಗೃತದಳದ ಅನೀಶ್ ಕುಮಾರ್ ಪಾಠಕ್ ಇಇ(ವಿ)ರವರ ದೂ.ಸಂ. 9448994737, ಸೆಸ್ಕ್ ಜಾಗೃತದಳದ ಪೊಲೀಸ್ ನಿರೀಕ್ಷಕರಾದ ಆನಂದಮೂರ್ತಿ ಸಿ. ರವರ ದೂ.ಸಂ. 9448994736 ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.