ಬಹಿಷ್ಕಾರ ಮಾಡಿದರೆ ಕಾನೂನು ಕ್ರಮ

24ldh4
Published on

ಲಿಂಗದಹಳ್ಳಿ: ಪ್ರೀತಿಸಿ ಮದುವೆಯಾದ ಯುವತಿ ಕುಟುಂಬಕ್ಕೆ ಅದೇ ಸಮುದಾಯದವರು ಬಹಿಷ್ಕಾರ ಹಾಕಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಲಿಂಗದಹಳ್ಳಿಯಲ್ಲಿ ಸ್ಥಳೀಯ ಪೊಲೀಸರು ಸಾರ್ವಜನಿಕರ ಸಭೆ ನಡೆಸಿ ಕಾನೂನು ಅರಿವು ನೀಡಿದರು.

ಭೋವಿ ಸಮುದಾಯದ ಯುವತಿ ಮತ್ತು ಆದಿ ಕರ್ನಾಟಕ ಸಮುದಾಯದ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಯನ್ನು ಒಪ್ಪಿ ಯುವತಿ ಮನೆಯವರು ಮದುವೆ ಮಾಡಿಕೊಟ್ಟಿದ್ದರು. ಇದರಿಂದ ಭೋವಿ ಸಮುದಾಯ ಮುಖಂಡರು ಯುವತಿಯ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದರೂ ಎನ್ನಲಾಗಿದೆ.

ಈ ಹಿನ್ನಲೆಯಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಹಾಲಮೂರ್ತಿ ರಾವ್ ಮಾತನಾಡಿ, ಯಾರ ವಿರುದ್ಧವು ಜಾತಿಯತೆ, ಬಹಿಷ್ಕಾರ ಮಾಡುವಂತಿಲ್ಲ .ಅಂತಹ ಘಟನೆಗಳು ನಡೆದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ವೃತ್ತ ನಿರೀಕ್ಷಕರಾದ ಗಿರೀಶ್, ಲಿಂಗದಹಳ್ಳಿ ಆರಕ್ಷಕ ಠಾಣಾಧಿಕಾರಿ ಶಶಿಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net