ಜಾಲಿವುಡ್ ವಿರುದ್ಧ ಕಾನೂನು ಕ್ರಮ

Published on

ಬಳ್ಳಾರಿ : ಮಾಲಿನ್ಯ ನಿಯಂತ್ರಣ ಉಲ್ಲಂಘನೆ ಆರೋಪದಡಿ ಜಾಲಿವುಡ್ ಸ್ಟುಡೀಯೊವನ್ನು ಮುಚ್ಚಲಾಯಿತು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಬಹುಜನರ ಮನೋರಂಜನೆಯ ಬೇಡಿಕೆ ಸ್ಪಂದನೆ ಹಿನ್ನೆಲೆ ಮೂವತ್ತು ಎಕರೆ ಪ್ರದೇಶದಲ್ಲಿ ಕೇವಲ ಒಂದು ಭಾಗದಲ್ಲಿ ಮಾತ್ರ ತೆರೆಯಲಾಗಿದೆ. ಈಗಾಗಲೇ ಜಾಲಿವುಡ್ ಸ್ಟುಡಿಯೋ ಮೇಲೆ ಕಾನೂನು ರೀತಿಯಲ್ಲಿ ಕ್ರಮವಹಿಸಲಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ ಅವರ ನಟ್ ಬೋಲ್ಟ್ ಟೈಟ್ ಮಾಡುವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಊಹಾಪೋಹವಾಗಿದ್ದು , ಅದಕ್ಕೆ ಉತ್ತರ ನೀಡಲ್ಲ. ಯಾವತ್ತು ಆಡಿದ ಮಾತುಗಳನ್ನು ಈಗ ಪ್ರಸ್ತಾಪ ಮಾಡುತ್ತಿರುವುದು ಸರಿಯಲ್ಲ. ಬಿಜೆಪಿಯವರಿಗೆ ರಾಜ್ಯದಲ್ಲಿ ಮಾಡುವುದಕ್ಕೆ ಕೆಲಸ ಇಲ್ಲದೆ ಇರುವುದರಿಂದ ಇಂತಹ ಆರೋಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮಾಲಿನ್ಯ ಉಲ್ಲಂಘನೆ ಮೀರಿದ 150 ಕಾರ್ಖಾನೆಗಳನ್ನು ಮುಚ್ಚಲು ಆದೇಶ ನೀಡಲಾಗಿದೆ. ಹಂತ ಹಂತವಾಗಿ ನಿಯಮ ಮೀರಿದ ಕಾರ್ಖಾನೆಗಳನ್ನು ಬಂದ್ ಮಾಡಲಾಗುವುದು. ಎಲ್ಲ ಕಡೆ ನಾನು ಹೋಗದೆ ಇದ್ದರೂ, ಅಧಿಕಾರಿ ತಂಡ ಕಳುಹಿಸಿ ಪರಿಶೀಲಿಸುವೆ. ನಿಯಮ ಮೀರಿದ ಕಂಪನಿಗಳ ಮೇಲೆ ಯಾರೇ ಎಷ್ಟೇ ಪ್ರಭಾವಿಗಳ ಆಗಲಿ ಕ್ರಮದ ರೂಪದಲ್ಲಿ ಉತ್ತರ ನೀಡುವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net