ಎಡದಂಡೆ ಮುಖ್ಯನಾಲೆಯ ಸೇತುವೆ ಶಿಥಿಲ

11.ktal.01
ಲಕ್ಷ್ಮೀಕ್ಯಾಂಪ್ ಹತ್ತಿರದ ತುಂಗಭದ್ರಾ ಎಡದಂಡೆ ಮುಖ್ಯನಾಲೆಗೆ ನಿರ್ಮಿಸಿದ ಸೇತುವೆ ಶಿಥಿಲಗೊಂಡಿರುವುದು.
Published on

ಕವಿತಾಳ: ಸಮೀಪದ ಲಕ್ಷ್ಮೀಕ್ಯಾಂಪ್ ಪಕ್ಕದಲ್ಲಿರುವ ತುಂಗಭದ್ರಾ ಎಡದಂಡೆ ನಾಲೆಯ ಮುಖ್ಯಕಾಲುವೆಯ ಪುರಾತನ ಸೇತುವೆ ಶಿಥಿಲಗೊಂಡಿದ್ದು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ದುರಸ್ತಿಗೆ ಮುಂದಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸೇತುವೆಯು ಕವಿತಾಳ, ಮಾನ್ವಿ, ಸಿಂಧನೂರಿಗೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೆ ಬ್ಯಾಗವಾಟ, ಬಾಗಲವಾಡ, ಲಕ್ಷ್ಮೀಕ್ಯಾಂಪ್, ನಡುಗಡ್ಡೆ ಕ್ಯಾಂಪ್ ಸೇರಿ ವಿವಿಧ ಕ್ಯಾಂಪ್‌ಗಳ ರೈತರು ಭತ್ತವನ್ನು ರಾಯಚೂರು ಮತ್ತು ಇತರ ಪ್ರಮುಖ ನಗರಗಳ ರೈಸ್‌ಮಿಲ್‌ಗಳಿಗೆ ಸರಬರಾಜು ಮಾಡುತ್ತಾರೆ. ತುಂಗಭದ್ರಾ ಅಣೆಕಟ್ಟೆ ಕಟ್ಟಿದ ನಂತರ ಎಡದಂಡೆ ಮುಖ್ಯನಾಲೆ ನಿರ್ಮಾಣ ವೇಳೆ 1964ರಲ್ಲಿ ಈ ಸೇತುವೆ ನಿರ್ಮಿಸಿದ್ದು, 70 ವರ್ಷ ಗತಿಸುತ್ತಿದೆ.

ಸದ್ಯ ಬ್ರಿಡ್ಜ್ ಶಿಥಿಲಗೊಂಡಿದ್ದು, ನಿತ್ಯ ವಾಹನಗಳ ಸಂಚಾರ ಮಾಡುತ್ತಿರುವುದು ಅಪಾಯಕ್ಕೆ ಆಹ್ವಾನಿಸುತ್ತಿದೆ. ಸಂಬಂಧಪಟ್ಟವರು ಇತ್ತ ಗಮನಹರಸಿ ನೂತನ ಸೇತುವೆ ನಿರ್ಮಿಸಬೇಕು ಎಂದು ಸುತ್ತಲಿನ ಗ್ರಾಮಗಳ ಜನರು ಒತ್ತಾಯಿಸಿದ್ದಾರೆ. ಹೊಸ ಸೇತುವೆ ನಿರ್ಮಾಣಕ್ಕೆ ನಿರ್ಲಕ್ಷೃ: ಇದೇ ನಾಲೆಗೆ 1964ರಲ್ಲಿ ನಾಗಲದಿನ್ನಿ ಹತ್ತಿರ ಸೇತುವೆ ನಿರ್ಮಿಸಲಾಗಿತ್ತು. ಅದು ಕೂಡ ಶಿಥಿಲಗೊಂಡಿದೆ.

ಹಾಲಪೂರ-ಸಾನಬಾಳಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ, ಗುಗೆಬಾಳ ಹತ್ತಿರದಲ್ಲಿರುವ ಸೇತುವೆ ಈ ಮೂರು ಸೇತುವೆ ತೆರವುಗೊಳಿಸುವ ಕಾರ್ಯ ನಡೆದಿದ್ದು, ಇವು ಮಸ್ಕಿ ತಾಲೂಕಿಗೆ ಒಳಪಡುತ್ತವೆ. ಇದರ ಪಕ್ಕದಲ್ಲಿ ನೂತನ ಸೇತುವೆಗಳ ನಿರ್ಮಾಣ ಮಾಡಲಾಗುತ್ತದೆ. ಆದರೆ, ಮಾನ್ವಿ ವಿಧಾನಸಭೆ ವ್ಯಾಪ್ತಿ ಸಿರವಾರ ತಾಲೂಕಿನ 74ಕ್ಯಾಂಪ್ ಹತ್ತಿರದ ಸೇತುವೆ ಮತ್ತು ಲಕ್ಷ್ಮೀಕ್ಯಾಂಪ್ ಪಕ್ಕದಲ್ಲಿರುವ ಶಿಥಿಲಗೊಂಡ ಸೇತುವೆಗಳನ್ನು ತೆರವುಗೊಳಿಸದಿರುವುದು ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಮಾಜ ಸೇವಕಿ, ಸಿರವಾರ ವಿಜಯರಾಣಿಕವಿತಾಳ-ಹಣಗಿ ಮೂಲಕ ಮಾನ್ವಿಗೆ ಸಂಪರ್ಕ ಕಲ್ಪಿಸುವ ಲಕ್ಷ್ಮೀಕ್ಯಾಂಪ್ ಹತ್ತಿರದ ಸೇತುವೆ ಶಿಥಿಲಗೊಂಡಿದೆ. ಸೇತುವೆ ನಿರ್ಮಿಸಿ 70 ವರ್ಷ ಗತಿಸುತ್ತಿದ್ದು, ಅನಾಹುತಗಳು ಆಗುವ ಮೊದಲೇ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಕೊಂಡು ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು.

ಶಾಸಕ, ಮಾನ್ವಿ 

ಹಂಪಯ್ಯನಾಯಕ

ಕವಿತಾಳದಿಂದ ಮಲ್ಲದಗುಡ್ಡ ಮೂಲಕ ಹೋಗುವ ಮುಖ್ಯರಸ್ತೆಗೆ 74 ಕ್ಯಾಂಪ್ ಪಕ್ಕದಲ್ಲಿರುವ ನಾಲೆಗೆ ನಿರ್ಮಿಸಿದ ಸೇತುವೆ ಮತ್ತು ಬಾಗಲವಾಡ ಹತ್ತಿರದ ಮುಖ್ಯನಾಲೆಗೆ ನಿರ್ಮಿಸಿದ ಸೇತುವೆ ಶಿಥಿಲಗೊಂಡಿರುವ ಬಗ್ಗೆ ಮಾಹಿತಿ ಇದ್ದು, ಕ್ರಮ ಕೈಗೊಳ್ಳಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net