ಎಲ್‌ಇಡಿ ಟಿವಿ, ಪ್ರೊಜೆಕ್ಟರ್ ಅಳವಡಿಕೆ

16-OCT-GPT-2
ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿಯ ಸಫಾರಿ ಟಿಕೆಟ್ ಕೌಂಟರ್ ಸಮೀಪ ದೊಡ್ಡ ಎಲ್‌ಇಡಿ ಟಿವಿ ಹಾಗೂ ಪ್ರೊಜೆಕ್ಟರ್ ಅಳವಡಿಸಿದ ಸಂದರ್ಭ.
Published on

ಗುಂಡ್ಲುಪೇಟೆ: ಬಂಡೀಪುರದ ಮೇಲುಕಾಮನಹಳ್ಳಿಯ ಸಫಾರಿಗೆ ಬರುವ ಪ್ರವಾಸಿಗರಿಗೆ ಮಾಹಿತಿ ನೀಡಲು ಅರಣ್ಯ ಇಲಾಖೆ ಟಿಕೆಟ್ ಕೌಂಟರ್ ಸಮೀಪ ದೊಡ್ಡ ಎಲ್‌ಇಡಿ ಟಿವಿ ಹಾಗೂ ಪ್ರೊಜೆಕ್ಟರ್ ಅಳವಡಿಸಿದೆ.

ಇತ್ತೀಚೆಗೆ ಬಂಡೀಪುರ ಸಫಾರಿಗೆ ಆಗಮಿಸಿದ್ದ ಮುಂಬೈ ಮೂಲದ ಉದ್ಯಮಿಗಳ ತಂಡಕ್ಕೆ ಹುಲಿ, ಚಿರತೆ, ಆನೆ, ಕಾಟಿ ಮುಂತಾದ ವನ್ಯಜೀವಿಗಳು ದರ್ಶನ ನೀಡಿದ್ದರಿಂದ ಪುಳಕಿತರಾಗಿ ತಮ್ಮ ಕಂಪನಿಯ ಅನುದಾನ 5 ಲಕ್ಷ ರೂ. ವೆಚ್ಚದಲ್ಲಿ ಎಲ್‌ಇಡಿ ಟಿವಿ ಹಾಗೂ ಪ್ರೊಜೆಕ್ಟರ್ ಕೊಡುಗೆಯಾಗಿ ನೀಡಿದ್ದಾರೆ. ಇದರಿಂದ ಬಂಡೀಪುರಕ್ಕೆ ಸಫಾರಿಗೆ ಬರುವ ಪ್ರವಾಸಿಗರಿಗೆ ಅರಣ್ಯ ಹಾಗೂ ವನ್ಯಜೀವಿಗಳ ಮಾಹಿತಿ ದೊರಕಿ ಪರಿಸರದ ಬಗ್ಗೆ ಇನ್ನೂ ಹೆಚ್ಚಿನ ಆಸಕ್ತಿ ಮೂಡಲಿದೆ ಎಂದು ಗೋಪಾಲಸ್ವಾಮಿಬೆಟ್ಟ ವಲಯದ ಆರ್‌ಎಫ್‌ಒ ಬಿ.ಎಂ.ಮಲ್ಲೇಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net