ಜ್ಞಾನ ಪಸರಿಸುವಲ್ಲಿ ಉಪನ್ಯಾಸ ಗೋಷ್ಠಿಗಳ ಪಾತ್ರ ಪ್ರಮುಖ

Lectures play an important role in imparting knowledge
ಇಂಡಿ ಪಟ್ಟಣದ ಹಡಪದ ಅಪ್ಪಣ್ಣ ಕನ್ನಡ& ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್​ ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅಂಬಣ್ಣ ಸುಣಗಾರ ಮಾತನಾಡಿದರು. ಗಂಗಾ ಗಲಗಲಿ, ಎಸ್​.ಐ. ಸುಗೂರ, ಎಚ್​.ಎಸ್​.ಎಳೆಗಾಂವ, ಜಯಶ್ರೀ ಗೌಡ ಇತರರಿದ್ದರು.
Published on

ಇಂಡಿ: ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಜ್ಞಾನ ಪಸರಿಸುವಲ್ಲಿ ಉಪನ್ಯಾಸ ಗೋಷ್ಠಿಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಸರ್ಕಾರಿ ನೌಕರರ ಸಂದ ಮಾಜಿ ಅಧ್ಯ, ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯ ಅಂಬಣ್ಣ ಸುಣಗಾರ ಹೇಳಿದರು.

ಪಟ್ಟಣದ ಹಡಪದ ಅಪ್ಪಣ್ಣ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್​ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕದಳಿ ವೇದಿಕೆ ಅಧ್ಯೆ ಗಂಗಾ ಗಲಗಲಿ ಮಾತನಾಡಿ, ಉಪನ್ಯಾಸಗಳು ಹೊಸ ವಿಷಯಗಳನ್ನು ತಿಳಿಯಲು ಹಾಗೂ ಅಧ್ಯಯನ ಮಾಡಲು ಅನುಕೂಲವಾಗುತ್ತವೆ ಎಂದರು.

ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಯುವ ಟಕದ ಅಧ್ಯ ಎಸ್​.ಐ. ಸುಗೂರ ಮಾತನಾಡಿದರು. ಎಚ್​.ಎಸ್​.ಎಳೆಗಾಂವ, ಜಯಶ್ರೀ ಗೌಡ, ರಾಜಶ್ರೀ ತ್ರಿ, ಐ.ಎಸ್​.ರೂಗಿ ಮಾತನಾಡಿದರು. ದತ್ತಿ ಸ್ಮರಣೆಯಲ್ಲಿ ಭೌರಮ್ಮ ಗಿರಿಮಲ್ಲಪ್ಪ ಗಲಗಲಿ ಅವರ ಕುರಿತು ಗಂಗಾ ಗಲಗಲಿ, ಚಂದ್ರಕಾಂತ ಗಲಗಲಿ ಕುರಿತು ಭವಾನಿ ಗುಳೆದಗುಡ್ಡ ಮಾತನಾಡಿದರು.

ಹಡಪದ ಅಪ್ಪಣ್ಣ ಶಿಣ ಸಂಸ್ಥೆಯ ಅಧ್ಯ ಸಂತೋಷ ಗವಳಿ, ಕಾರ್ಯದರ್ಶಿ ಸಿದರಾಯ ಅಪ್ತಾಗಿರಿ, ಆಡಳಿತಾಧಿಕಾರಿ ಎಸ್​.ಟಿ. ಬಿರಾದಾರ, ಎಸ್​.ಎಸ್​.ಈರನಕೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net