

ಜನ್ನಾಡಿ: ಉಡುಪಿ ಜಿಲ್ಲಾ ಕನ್ನಡ ಉಪನ್ಯಾಸಕರ ಸಂಘದ ವತಿಯಿಂದ ಕನ್ನಡ ಕಾರ್ಯಾಗಾರ ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ, ಕನ್ನಡ ಸಂಘದ ಗೌರವಾಧ್ಯಕ್ಷ ಶ್ರೀಧರ ಶೆಟ್ಟಿ, ವಿಶ್ವನಾಥ ಕರಂಬ, ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ, ವಾಸಂತಿ ಅಂಬಲಪಾಡಿ ಇದ್ದರು.
ಕನ್ನಡ ವಿಷಯದಲ್ಲಿ 100 ಅಂಕ ಪಡೆದ ಬಿದ್ಕಲಕಟ್ಟೆ ಕಾಲೇಜಿನ ಆದರ್ಶ, ಕುಂದಾಪುರದ ಆರ್.ಎನ್ ಶೆಟ್ಟಿ ಕಾಲೇಜಿನ ಸುಹಾನಿ ಹಾಗೂ ಇನ್ನಂಜೆ ಎಸ್‌ವಿಎಚ್ ಕಾಲೇಜಿನ ಅಶ್ವಿನ್ ಅವರನ್ನು ಕರ್ಣಾಟಕ ಬ್ಯಾಂಕ್ ಸಹಾಯಕ ಮಹಾಪ್ರಬಂಧಕ ವಾದಿರಾಜ ಕೆ. ಸನ್ಮಾನಿಸಿದರು. ಉಡುಪಿ ಜಿಲ್ಲಾ ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಮಾರುತಿ ಅಧ್ಯಕ್ಷತೆ ವಹಿಸಿದ್ದರು. ಕಾಳಾವರ ಉದಯ್‌ಕುಮಾರ್ ಶೆಟ್ಟಿ ಸ್ವಾಗತಿಸಿದರು. ಉದಯ ನಾಯ್ಕ ವಂದಿಸಿದರು. ನಾಗರಾಜ ಕೆ. ಸಾಧಕ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ಸುಜಯಿಂದ್ರ ಕಾರ್ಯಕ್ರಮ ನಿರೂಪಿಸಿದರು.