ಕ್ರೀಡೆ ತರಲಿದೆ ಸಾಮಾಜಿಕ ಹೊಣೆ

dj clk pu col sports
Published on

ಚಳ್ಳಕೆರೆ: ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಹೆಚ್ಚಿಸುತ್ತದೆ ಎಂದು ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮಣ್ ಹೇಳಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕ್ರೀಡಾ ಸಾಧಕರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿ ದಿಸೆಯಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡುವ ಸಂಕಲ್ಪ ಮಕ್ಕಳಲ್ಲಿ ಇರಬೇಕು. ಇದರಿಂದ ಪಾಲಕರು ಮತ್ತು ಕಾಲೇಜಿನ ಕೀರ್ತಿ ಹೆಚ್ಚಾಗಲಿದೆ ಎಂದು ಕಿವಿಮಾತು ಹೇಳಿದರು.

ಉಪನ್ಯಾಸಕರಾದ ಬೆಳಗಟ್ಟ ನಾಗರಾಜ, ಡಾ.ತಿಮ್ಮಣ್ಣ, ಮಂಜುನಾಥ, ಕರುಡಪ್ಪ, ಪೂರ್ಣಾಚಾರ್, ಮಧು, ರಿಜ್ವಾನ್ ಇತರರಿದ್ದರು.

ತನುಶ್ರೀ (ನಾಯಕಿ), ಯಶಸ್ವಿನಿ, ಸಂಜನಾ, ಕೀರ್ತನಾ, ಕೌಸರ್, ಅಕ್ಷತಾ, ಚಂದನಾ, ಮಾನಸಾ, ಐಶ್ವರ್ಯಾ ಅವರನ್ನೊಳಗೊಂಡ ತಂಡ ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net